ಬೈಂದೂರು: ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು ವಿದ್ಯೆ, ಆರೋಗ್ಯ, ವಸತಿ. ಇದರಿಂದ ವಂಚಿತರಾಗುವವರಿಗೆ ನೆರವು ನೀಡಲು ಹಲವು ವರ್ಷಗಳಿಂದ ಟ್ರಸ್ಟ್ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ. ಜನರಿಗೆ ನೀಡುವ ದಾನ ನಾವು ಸಮುದಾಯಕ್ಕೆ ಮಾಡಬಹುದಾದ ಬಹುದೊಡ್ಡ ಸೇವೆ ಎಂದು ಮಾರಣಕಟ್ಟೆ ಎಂ.ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮಾರಣಕಟ್ಟೆ ಶ್ರೀ ಕೃಷ್ಣಮೂರ್ತಿ ಮಂಜ ಹೇಳಿದರು. ಆಲೂರು ಗ್ರಾಮ ಕಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಟ್ರಸ್ಟ್ ವತಿಯಿಂದ ಕೊಡಮಾಡುವ ನೋಟ್ ಪುಸ್ತಕ ಮತ್ತು ಸಮವಸ್ತಗಳನ್ನು ವಿತರಿಸಿ ಮಾತನಾಡಿದರು.
ಆಲೂರು ಗ್ರಾಪಂ ಅಧ್ಯಕ್ಷ ರಾಜೇಶ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಮತ್ತು ಶಾಲೆ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ಮತ್ತು ಸಮವಸ್ತ ವಿತರಿಸಲಾಯಿತು. ಗ್ರಾಪಂ ಸದಸ್ಯೆ ಗಂಗೆ ಶೆಟ್ಟಿ ಹೊಸಕುಂದ, ಶಾಲಾ ಸಮಿತಿ ಅಧ್ಯಕ್ಷ ಡಾ.ರಾಜೇಶ ಬಾಯರಿ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಪೂಜಾರಿ, ಉಪಾಧ್ಯಕ್ಷೆ ಶ್ರೀಲತಾ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಗುಂಡು ಪೂಜಾರಿ ಹರವರಿ, ಪೂರ್ವಾಧ್ಯಕ್ಷ ಚಂದ್ರಯ್ಯ ಆಚಾರ್ಯ ಕಳಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಪೂಜಾರಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಹಶಿಕ್ಷಕ ಶಂಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ಪೂಜಾ, ಶ್ರೀಮತಿ ಸಹಕರಿಸಿದರು.