ಜಿಲ್ಲೆ

ಬ್ರಹ್ಮಾವರದಲ್ಲಿ ತಾತ್ಕಾಲಿಕ ಸರ್ವಿಸ್ ರಸ್ತೆಗೆ ಆಗ್ರಹ

Karthika K.S

ಬ್ರಹ್ಮಾವರ: ಬ್ರಹ್ಮಾವರದಲ್ಲಿ ತಕ್ಷಣ ಸರ್ವಿಸ್ ರಸ್ತೆ ಆರಂಭಿಸದಿದ್ದರೆ ಏ.29ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಫ್ಲೈಓವರ್ ಹೋರಾಟ ಸಮಿತಿಯ ಅಲ್ವಿನ್ ಅಂದ್ರಾದೆ ಎಚ್ಚರಿಸಿದರು.

ಬ್ರಹ್ಮಾವರದ ಗಜಾನನ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ 90 ಕೋಟಿ ರೂ. ವೆಚ್ಚದಲ್ಲಿ ಮಾಬುಕಳ ಸೇತುವೆಯಿಂದ ಭದ್ರಗಿರಿ ತನಕ ಸರ್ವಿಸ್ ರಸ್ತೆಗೆ ಟೆಂಡರ್ ಆಗಿದೆ ಎಂದು ಅಧಿಕಾರಿಗಳಿಂದ ಮಾಹಿತಿ ದೊರಕಿದೆ. ಸಂಸದರು ನಮ್ಮ ಮನವಿಗೆ ಸ್ಪಂದಿಸಿ ಸರ್ವಿಸ್ ರಸ್ತೆ, ಫ್ಲೈಓವರ್‌ಗೆ ಭರವಸೆ ನೀಡಿದ್ದಾರೆ. ತಾತ್ಕಾಲಿಕ ಸರ್ವಿಸ್ ರಸ್ತೆ ಕಾಮಗಾರಿಯನ್ನು ಏ.27ರೊಳಗೆ ಆರಂಭಿಸದೇ ಇದ್ದಲ್ಲಿ 29ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದರು.

ಮಾಹಿತಿ ಹಕ್ಕು ಹೋರಾಟಗಾರ ಸದಾಶಿವ ಶೆಟ್ಟಿ ಮಾತನಾಡಿ, 2019ರಿಂದ 2024ರವರೆಗೆ ಬ್ರಹ್ಮಾವರದಲ್ಲಿ 95 ಅಪಘಾತಗಳಾಗಿದ್ದು, 69 ಮಂದಿಗೆ ಗಾಯಗಳಾಗಿದ್ದು 26 ಮಂದಿ ಜೀವಕಳೆದುಕೊಂಡಿದ್ದಾರೆ. ಅಪಘಾತ ತಪ್ಪಿಸಲು ಸರ್ವಿಸ್ ರಸ್ತೆ, ಫ್ಲೈಓವರ್ ನಿರ್ಮಾಣವಾಗಬೇಕು ಎಂದರು.

ಜಿಪಂ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ದಲಿತ ಸಂಘಟನೆ ಶ್ಯಾಮರಾಜ್ ಬಿರ್ತಿ, ಪ್ರಮುಖರಾದ ವಸಂತ್ ಗಿಳಿಯಾರ್, ಹರೀಶ್ ಕುಂದರ್, ಉದಯಕುಮಾರ್, ದೇವದಾಸ್ ಶೆಟ್ಟಿ, ಸಂಕಯ್ಯ ಶೆಟ್ಟಿ, ಜೋಸೆಫ್ ಸುವಾರಿಸ್, ವಿಕ್ರಮ್ ಪ್ರಭು ಉಪಸ್ಥಿತರಿದ್ದರು.