ಜಿಲ್ಲೆ

ಮಹಿಳಾ ಸ್ವಾವಲಂಬನೆಯಿಂದ ಸಮಾಜದ ಪ್ರಗತಿ : ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಅಭಿಮತ

ಸೌಮ್ಯ ಆರ್

ಮೂಲ್ಕಿ: ಗ್ರಾಮ ಸಂತೆ ಕಾರ್ಯಕ್ರಮದ ಮೂಲಕ ಮಹಿಳೆಯರು ಸ್ವಾವಲಂಬಿಯಾಗಿ ಆರ್ಥಿಕ ಉನ್ನತಿ ಗಳಿಸಿ ಕುಟುಂಬ ಹಾಗೂ ಸವಾಜದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡಲು ಸಾಧ್ಯವಿದೆ ಎಂದು ಪಡುಪಣಂಬೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಚಂದ್ರಶೇಖರ್ ಹೇಳಿದರು.

ಪಡುಪಣಂಬೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಗ್ರಾಪಂ ಮಟ್ಟದ ಉವಾಮಹೇಶ್ವರ ಸಂಜೀವಿನಿ ಒಕ್ಕೂಟಗಳು ತಯಾರಿಸಿದ ಗೃಹಬಳಕೆಯ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ವಾರಾಟ ‘ದೀಪಾವಳಿ ಗ್ರಾಮ ಸಂತೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಂಚಾಯಿತಿ ಸದಸ್ಯರಾದ ಜ್ಯೋತಿ ಕುಲಾಲ್, ವಿನೋದ್ ಎಸ್.ಸಾಲ್ಯಾನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧೀರ್, ಕಾರ್ಯದರ್ಶಿ ಸುಜಾತಾ, ಸಿಬ್ಬಂದಿ ವರ್ಗ, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಗೀತಾ ಗಣೇಶ್, ಸಂಜೀವಿನಿ ಒಕ್ಕೂಟದ ಉಪಾಧ್ಯಕ್ಷೆ ಪುಷ್ಪಾವತಿ, ಕೋಶಾಧಿಕಾರಿ ಜಯಲಕ್ಷ್ಮೀ, ಸಂಜೀವಿನಿ ಒಕ್ಕೂಟದ ಮುಖ್ಯ ಪುಸ್ತಕ ಬರಹಗಾರ್ತಿ ಸವಿತಾ ಶೆಟ್ಟಿ, ಪಶುಸಖಿ ಪದ್ಮಪ್ರಿಯಾ, ಸ್ಥಳೀಯ ಸಂಪನ್ಮೂಲ ವ್ಯಕ್ತಿ ಸುಧಾ ಹಾಗೂ ಒಕ್ಕೂಟದ ಸದಸ್ಯರು ಪಾಲ್ಗೊಂಡಿದ್ದರು.