ಜಿಲ್ಲೆ

ಸೇವಾ ಚಟುವಟಿಕೆಯಿಂದ ಋಣಮುಕ್ತ : ಡಿ.ಚಂದಪ್ಪ ಮೂಲ್ಯ ಅನಿಸಿಕೆ

ಸೌಮ್ಯ ಆರ್

ಉಪ್ಪಿನಂಗಡಿ: ಸಮಾಜದಲ್ಲಿ ವಿವಿಧ ಸೇವಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಸಾಮಾಜಿಕ ಋಣದಿಂದ ಮುಕ್ತರಾಗುವುದಲ್ಲದೆ ಒಂಟಿತನದಿಂದ ಹೊರಬರಲು ಹಿರಿಯರಿಗೆ ಸಹಾಯಕವಾಗುತ್ತದೆ ಎಂದು ನಿವೃತ್ತ ಭೂ ಸೇನಾ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ತಿಳಿಸಿದರು.

ಉಪ್ಪಿನಂಗಡಿ ಪಂಜಳದ ವಿರಾಮದ ಮನೆಯಲ್ಲಿ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರು ಬಂಟ್ವಾಳ ಕೇಂದ್ರ ಸಮಿತಿಯ ಸಭೆ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯೂರು ನಾರಾಯಣ ಭಟ್ ಪ್ರತಿಷ್ಠಾನದ ತೃತೀಯ ವಾರ್ಷಿಕೋತ್ಸವದ ದಾನಿಗಳನ್ನು ಸ್ಮರಿಸಿ ಜನವರಿ 26ರಂದು ವಿಷ್ಣು ಸಹಸ್ರನಾಮ ಪಠಣ ಅಭಿಯಾನದಲ್ಲಿ ಭಾಗಿಗಳಾಗಬೇಕೆಂದು ತಿಳಿಸಿದರು.

ಮುಂಬೈ ವಿವಿ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ತಾಳ್ತಜೆ ವಸಂತ ಕುಮಾರ ಮಾತನಾಡಿದರು. ಪ್ರತಿಷ್ಠಾನದ ತಾಲೂಕು ಘಟಕಗಳಿಗೆ ಕೇಂದ್ರ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಸಕ್ರಿಯಗೊಳಿಸುವ ಬಗ್ಗೆ ವಿಚಾರ ವಿನಿಮಯ ಮಾಡಲಾಯಿತು. ಕೇಂದ್ರ ಸಮಿತಿ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಘಟಕದ ಪದಾಧಿಕಾರಿಗಳಾದ ಕೃಷ್ಣ ಶರ್ಮ ಅನಾರು, ಗುಂಡ್ಯಡ್ಕ ಈಶ್ವರ ಭಟ್, ಸುಬ್ರಾಯ ರಾಮ ಮಡಿವಾಳ ಬಿ.ಸಿ.ರೋಡ್, ಡಾ.ಬಿ.ಎನ್.ಮಹಾಲಿಂಗ ಭಟ್, ಉಮೇಶ ಶೆಣೈ ಉಪ್ಪಿನಂಗಡಿ, ಚಂದ್ರಶೇಖರ ಆಳ್ವ ಪಡುಮಲೆ, ರೋಹಿತ್ ಮಂಚಿ ಉಪಸ್ಥಿತರಿದ್ದರು.

ಡಾ.ವಾರಿಜಾ ದೇವಿ ನೀರ್ಬೈಲು ಪ್ರಾರ್ಥಿಸಿದರು. ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿ, ಭವಾನಿ ಶಂಕರ ಶೆಟ್ಟಿ ವಂದಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿದರು.