ಜಿಲ್ಲೆ

ಜಿದ್ದಾದಲ್ಲಿ ಹೃದಯಾಘಾತದಿಂದ ಮೃತ್ಯು

ಸೌಮ್ಯ ಆರ್

ಕಾಸರಗೋಡು: ಪುತ್ತಿಗೆ ಪಂಚಾಯಿತಿ ಅಂಗಡಿಮೊಗರು ಕಮ್ಮಂದಳ ನಿವಾಸಿ ಕೆ.ಎಸ್.ಸೂಫಿ(50) ಎಂಬುವರು ಜಿದ್ದಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಗಳವಾರ ಜಿದ್ದಾದಲ್ಲಿನ ಅವರ ವಾಸಸ್ಥಳದಲ್ಲಿ ಪ್ರಾರ್ಥನೆಗೆ ಸಿದ್ಧರಾಗುತ್ತಿದ್ದಂತೆ ಕುಸಿದು ಬಿದ್ದಿದ್ದು, ಸ್ಥಳದಲ್ಲೇ ಮೃತಪಪಟ್ಟರು. ಕಳೆದ ಮೂವತ್ತು ವರ್ಷಗಳಿಂದ ಜಿದ್ದಾದಲ್ಲಿ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅವರು, ಮೂರು ವರ್ಷಗಳ ಹಿಂದೆ ಅಂಗಡಿಮೊಗರಿನ ಮನೆಗೆ ಆಗಮಿಸಿ ವಾಪಸಾಗಿದ್ದರು. ಯು.ಕೆ.ಯಲ್ಲಿ ಕೆಲಸದಲ್ಲಿರುವ ಅವರ ಪುತ್ರ ಜಿದ್ದಾಕ್ಕೆ ಆಗಮಿಸಿದ ನಂತರ ಮೃತದೇಹದ ಅಂತಿಮ ಸಂಸ್ಕಾರ ಜಿದ್ದಾದಲ್ಲಿ ನೆರವೇರಿತು.