ಜಿಲ್ಲೆ

ರೈಲ್ವೆ ಹಳಿಯಲ್ಲಿ ಮೃತದೇಹ ಪತ್ತೆ

ಸೌಮ್ಯ ಆರ್

ಕಾಸರಗೋಡು: ನೆಲ್ಲಿಕುಂಜೆಯ ರೈಲ್ವೆ ಹಳಿಯಲ್ಲಿ ಅಪರಿಚಿತ ಪುರುಷ ಮೃತದೇಹ ಪತ್ತೆಯಾಗಿದೆ. ರೈಲು ಡಿಕ್ಕಿಯಾಗಿ ಮೃತಪಟ್ಟಿರಬೇಕೆಂದು ಸಂಶಯಿಸಲಾಗಿದೆ. ಸುಮಾರು 53 ವರ್ಷ ಪ್ರಾಯದವರಾಗಿದ್ದು, ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ನಗರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.