ಬೆಂಗಳೂರು: ಶಿಕ್ಷಕರಿಗೆ ಸಂಬಳ ನೀಡದ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದು, ಬಲವಂತದ ಬಾಡಿಗೆ ವಸೂಲಿ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ..
ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ 2020-21ನೇ ಸಾಲಿನ ಶುಲ್ಕ ವಸೂಲಿಯನ್ನು ಮೂರು ತಿಂಗಳು ಮುಂದೂಡುವಂತೆ ತಿಳಿಸಲಾಗಿದೆ. ಆದರೆ, ವಸೂಲಿ ಮಾಡದಂತೆ ಅಥವಾ ವಿನಾಯಿತಿ ನೀಡುವಂತೆ ಹೇಳಿಲ್ಲ. ಹೀಗಿರುವಾಗ ಶಿಕ್ಷಕರ ಸಂಬಳ ನೀಡದಿರುವುದನ್ನು ಸರ್ಕಾರ ಸಹಿಸುವುದಿಲ್ಲ. ಅಂತಹ ಪ್ರಕರಣಗಳ ವಿರುದ್ಧ ದೂರು ನೀಡಿದರೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಾನೂನು ಕ್ರಮಕೈಗೊಳ್ಳಲಿದೆ ಎಂದರು. ಸ್ಟಾರ್ಟ್ಅಪ್ ಸಮಸ್ಯೆಗಳು ಗಮನಕ್ಕೆ ಬಂದಿವೆ. ಕೇಂದ್ರ ಸರ್ಕಾರಕ್ಕೂ ಗಮನ ಸೆಳೆದು ಪರಿಹರಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾರ್ಖಾನೆ, ಐಟಿ-ಬಿಟಿ ಕಂಪನಿಗಳನ್ನು ಮುಚ್ಚಿ ನೌಕರರನ್ನು ಸಂಕಷ್ಟಕ್ಕೆ ತಳ್ಳದಂತೆ ಉದ್ಯಮಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಕೆಲವು ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದು, ನೌಕರರ ಸಂಬಳವನ್ನು ಶೇ.20-30 ಕಡಿತ ಮಾಡುತ್ತಿರುವುದು ವರದಿಯಾಗಿದೆ. ಕೆಲವರು ನೌಕರರನ್ನು ಕೆಲಸದಿಂದಲೇ ತೆಗೆದು ಹಾಕುವ ದೂರುಗಳು ಬರುತ್ತಿವೆ. ಈ ಕುರಿತು ಉದ್ಯಮಿಗಳ ಮನವೊಲಿಸಲಾಗುವುದು ಎಂದು ಹೇಳಿದರು.
ಲಾಕ್ಡೌನ್ ಹಿನ್ನೆಲೆ ಮದ್ಯದ ಅಂಗಡಿ ಮುಚ್ಚಿರುವುದರಿಂದ ಕಳ್ಳಭಟ್ಟಿ, ಆತ್ಮಹತ್ಯೆ, ವಿತ್ಡ್ರಾಯಲ್ ಸಿಂಡ್ರೋಮ್ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ತಜ್ಞರ ಸಲಹೆ ಪಡೆದು ಮದ್ಯದಂಗಡಿ ತೆರೆಯುವ ಕುರಿತು ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು.
ಆನ್ಲೈನ್ ಬೋಧನೆಗೆ ಹೆಚ್ಚಿನ ಆದ್ಯತೆ: ಕರೊನಾದಿಂದ ಉನ್ನತ ಶಿಕ್ಷಣದ ಅನೇಕ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆದರೆ, ವಿದ್ಯಾರ್ಥಿಗಳ ಬೋಧನೆಗೆ ಯಾವುದೇ ವ್ಯತ್ಯಯವಾಗಿಲ್ಲ. ಯುಟ್ಯೂಬ್ ಚಾನಲ್, ಆನ್ಲೈನ್, ಝುಮ್ ಆಪ್, ಮೈಕ್ರೋಸಾಫ್ಟ್ ಪ್ಲಾಟ್ ಫಾಮ್ರ್ ಬಳಸಿ ತರಗತಿ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಹಿತ ಗಮನದಲ್ಲಿಟ್ಟುಕೊಂಡು ಸರ್ಕಾರ ಅನೇಕ ಉಪ ಕ್ರಮಗಳನ್ನು ಕೈಗೊಂಡಿದೆ ಎಂದ ಡಿಸಿಎಂ, ವರ್ಕ್ ಫ್ರಮ್ ಹೋಮ್ೆ ಇಂಟರ್ನೆಟ್ ಪ್ರೊವೈಡರ್ಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. 4ಜಿ ಅನ್ನು ಮತ್ತಷ್ಟು ಬಲಪಡಿಸಲಾಗಿದೆ. ಇದರಿಂದ ಸಾಕಷ್ಟು ಐಟಿ ಕೆಲಸ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ, ಪರಿಹರಿಸಲು ಸೂಚಿಸಲಾಗುವುದು ಎಂದು ಬೆಂಗಳೂರಿನ ಸತೀಶ್ ಪ್ರಶ್ನೆಗೆ ಉತ್ತರಿಸಿದರು.
ಕೃಷಿ ಉತ್ಪನ್ನ ಸಾಗಣೆ, ಮಾರಾಟಕ್ಕೆ ವ್ಯವಸ್ಥೆ: ಕೃಷಿ ಉತ್ಪನ್ನ ಸಾಗಣೆ ಮತ್ತು ಮಾರಾಟಕ್ಕೆ ನಿರ್ಬಂಧ ವಿಧಿಸಿಲ್ಲ. ರೈತರು ಉತ್ಪನ್ನಗಳನ್ನು ತಮಗೆ ಬೇಕಾದ ಸ್ಥಳಕ್ಕೆ ಕೊಂಡೊಯ್ದು ಮಾರಾಟ ಮಾಡಬಹುದು. ಹಾಪ್ಕಾಮ್್ಸ ಕೂಡ ತೋಟಗಾರಿಕೆ ಉತ್ಪನ್ನಗಳನ್ನು ಖರೀದಿ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಮಾಡಿದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಎಂದು ಕೊಪ್ಪಳದ ರಮೇಶ್ ಪ್ರಶ್ನೆಗೆ ಅಶ್ವತ್ಥನಾರಾಯಣ ಉತ್ತರಿಸಿದರು.
ಕೇಬಲ್ ಆಪರೇಟರ್ಗೆ ರಕ್ಷಣೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ: ಕರೊನಾ ವಿರುದ್ಧದ ಹೋರಾಟದಲ್ಲಿ ಕೇಬಲ್ ಅಪರೇಟರ್ಗಳ ಪಾತ್ರವೂ ಮಹತ್ವದ್ದಿದೆ. ಜನರಿಗೆ ಇಂಟರ್ನೆಟ್, ಕೇಬಲ್ ಸೇವೆ ಒದಗಿಸುವ ಹಿನ್ನೆಲೆ ಈಗಾಗಲೇ 350 ಜನರಿಗೆ ಪಾಸ್ ವ್ಯವಸ್ಥೆ ಮಾಡಿದ್ದೇವೆ. ಇನ್ನಷ್ಟು ಪಾಸ್ ಒದಗಿಸುವುದರ ಜತೆಗೆ ಯಾವುದೇ ರೀತಿಯಲ್ಲಿ ತೊಂದರೆ ನೀಡದಂತೆ ಪೊಲೀಸರಿಗೆ ನಿರ್ದೇಶಿಸಲಾಗುವುದು ಎಂದು ಕರ್ನಾಟಕ ಕೇಬಲ್ ಅಪರೇಟರ್ ಅಸೋಷಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಪ್ರಶ್ನೆಗೆ ಅಶ್ವತ್ಥನಾರಾಯಣ ಭರವಸೆ ನೀಡಿದರು.
ಐಟಿ-ಬಿಟಿ ಸಂವಾದ ಇಂದು: ಲಾಕ್ಡೌನ್ನಿಂದ ಐಟಿ- ಬಿಟಿ ಕ್ಷೇತ್ರದಲ್ಲಿ ತಲೆದೋರಿರುವ ಬಿಕ್ಕಟ್ಟುಗಳ ಬಗ್ಗೆ ರ್ಚಚಿಸಲು ಮಂಗಳವಾರ ಉದ್ಯಮಿಗಳು ಹಾಗೂ ಮುಖ್ಯಸ್ಥರೊಂದಿಗೆ ವಿಡಿಯೋ ಕಾನ್ಪರೆನ್ಸ್ ನಡೆಸಲಾಗುವುದು ಎಂದು ಅಶ್ವತ್ಥನಾರಾಯಣ ತಿಳಿಸಿದರು.