ಜಿಲ್ಲೆ

ಲಾಂಗ್​ ಹಿಡ್ಕೊಂಡು ಬೀದಿಯಲ್ಲಿ ಅಡ್ಡಾಡಿದ ಮಹಿಳೆ ನೋಡಿ ದಿಕ್ಕಾಪಾಲಗಿ ಓಡಿದ ಜನ..!

ರಮೇಶ್​ ಕುಮಾರ್​​ ಬಿ ಎಡಮೋಳೆ

ದಾವಣಗೆರೆ: ಹಾಡು ಹಗಲಲ್ಲೇ ಮಹಿಳೆಯೊಬ್ಬಳು ಲಾಂಗ್​ ಹಿಡಿದುಕೊಂಡು ಮಾರುಕಟ್ಟೆಯಲ್ಲಿ ಓಡಾಡಿರುವ ಘಟನೆ ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ನಿವಾಸಿ ರುಕ್ಮಿಣಿ (34) ಲಾಂಗ್ ಹಿಡಿದು ಓಡಾಡಿದ ಮಹಿಳೆ. ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗಿದ್ದು, ಈಕೆಗೆ 3 ಮಕ್ಕಳಿದ್ದಾರೆ. ಲಾಂಗ್ ಹಿಡಿದು ಓಡಾಡಿದ್ದನ್ನು ಕಂಡು ಚನ್ನಗಿರಿ ಪಟ್ಟಣದ ಜನ ದಿಕ್ಕಾಪಾಲಾಗಿ ಓಡಿದ ಪ್ರಸಂಗವೂ ಜರುಗಿತು.

ಜೀನ್ಸ್ ಪ್ಯಾಂಟ್ ಮತ್ತು ಕೆಂಪು‌ ಜರ್ಕಿನ್ ಧರಿಸಿ ಬೀದಿ ಬೀದಿಗಳಲ್ಲಿ ಲಾಂಗ್​ ಹಿಡಿದುಕೊಂಡು ಮಹಿಳೆ ಅಡ್ಡಾಡಿದ್ದಾಳೆ. ಜೋಗಿ ಚಲನಚಿತ್ರದ ನಾಯಕನಂತೆ ಮಹಿಳೆ ಫೋಸ್ ನೀಡುತ್ತಿದ್ದಳು. ಆಟೋ ಚಾಲಕರು ಉಪಾಯವಾಗಿ ಮಹಿಳೆಯಿಂದ ಲಾಂಗ್ ಪಡೆದುಕೊಂಡರು.

ಇದಾದ ಬಳಿಕ ಆಕೆಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)