ಮಂಜೇಶ್ವರ: ಮೀಯಪದವು ವಿದ್ಯಾವರ್ಧಕ ಪ್ರೌಢ- ಪ್ರಾಥಮಿಕ ಶಾಲೆಯಲ್ಲಿ ಪಿ.ಎನ್.ಪಣಿಕ್ಕರ್ ಸ್ಮರಣಾರ್ಥ ವಾಚನಾ ಸಪ್ತಾಹ ಸಮಾರೋಪ ಸಮಾರಂಭ, ವಿವಿಧ ಕ್ಲಬ್‌ಗಳ ಉದ್ಘಾಟನೆ, ಜುಂಬಾ ಡ್ಯಾನ್ಸ್ ಕಾರ್ಯಾಗಾರ, ಮಾದಕ ವಸ್ತು ವಿರೋಧಿ ದಿನಾಚರಣೆ ನಡೆಯಿತು.
ಪ್ರಭಾರ ಮುಖ್ಯಶಿಕ್ಷಕ ರಾಮಚಂದ್ರ ಕೆ.ಎಂ. ವಿವಿಧ ಕ್ಲಬ್‌ಗಳನ್ನು ಉದ್ಘಾಟಿಸಿದರು. ಶಿಕ್ಷಕ ಬಾಲಕೃಷ್ಣ, ವಿಜ್ಞಾನ ಕ್ಲಬ್ ಸಂಚಾಲಕ ವಿನಯಕೃಷ್ಣ, ಸಮಾಜ ವಿಜ್ಞಾನ ಕ್ಲಬ್ ಸಂಚಾಲಕ ಮಹಾಬಲೇಶ್ವರ ಭಟ್, ಲ್ಯಾಬ್‌ನ ಸಂಚಾಲಕ ಹರೀಶ್, ಶಿಕ್ಷಕ ಮಹಾಬಲೇಶ್ವರ ಭಟ್ ಮಾಹಿತಿ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಶಿವಸುಬ್ರಹ್ಮಣ್ಯ ಪ್ರಸಾದ್ ಮತ್ತು ಮಕ್ಕಳ ನೇತತ್ವದಲ್ಲಿ ಮಕ್ಕಳಿಗೆ ಜುಂಬಾ ಡ್ಯಾನ್ಸ್ ತರಬೇತಿ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಜಾರಾಮ್ ರಾವ್ ಮೀಯಪದವು, ಮುಖ್ಯಶಿಕ್ಷಕ ಅರವಿಂದಾಕ್ಷ ಭಂಡಾರಿ ಶುಭ ಹಾರೈಸಿದರು. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮಟ್ಟದ ಶಾಲಾ ಸಂಪನ್ಮೂಲ ತಂಡಗಳ ಸಂಚಾಲಕ ಸುನೀಲ್ ಕುಮಾರ್ ಎಂ. ಮತ್ತು ಶ್ರೀಲಕ್ಷ್ಮೀ ಶುಭಾಶಂಸನೆಗೈದರು. ರಾಜಾರಾಮ್ ರಾವ್ ಅವರನ್ನು ಪ್ರಭಾರ ಮುಖ್ಯಶಿಕ್ಷಕ ರಾಮಚಂದ್ರ ಕೆ.ಎಂ. ಗೌರವಿಸಿದರು. ಶಿಕ್ಷಕ ಸುನೀಲ್ ಕುಮಾರ್ ಎಂ. ಸ್ವಾಗತಿಸಿದರು. ಶಿಕ್ಷಕ ರುವೀರ್ ರಾವ್ ಮತ್ತು ಶಿಕ್ಷಕಿ ಅರ್ಪಿತಾ ನಿರೂಪಿಸಿದರು. ಶಿಕ್ಷಕಿ ಶ್ರೀಲಕ್ಷ್ಮೀ ವಂದಿಸಿದರು.