ವಿಟ್ಲ ಕಸಬಾ ಗ್ರಾಮದ ಉಕ್ಕುಡ ಉಮ್ಮೆಟ್ಟುಗುಳಿ ನಿವಾಸಿ ಅಪ್ಪುಬೆಳ್ಚಡ ಎಂಬುವರ ಮನೆಮೇಲೆ ಗುರುವಾರ ರಾತ್ರಿ ಮರ ಬಿದ್ದು ಹಾನಿಯಾಗಿದೆ  
ಜಿಲ್ಲೆ

ಸುಳ್ಯದಲ್ಲಿ ಕಾಂಪೌಂಡ್ ಕುಸಿದು ಹಾನಿ, ಮನೆ ಮೇಲೆ ಬಿದ್ದ ಮರ

ಇಂದಿರಾ ಎನ್ ಕೆ

ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಕೊಡಂಕೇರಿ ಎಂಬಲ್ಲಿ ಮಹಮ್ಮದ್ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಮನೆಯ ಹಿಂಬದಿ ಮರ ಬಿದ್ದು ಮನೆಯ ಅಡುಗೆ ಕೋಣೆಯ ಛಾವಣಿಗೆ ಹಾನಿಯಾಗಿದೆ. ಮರ ಬಿದ್ದ ರಭಸಕ್ಕೆ ಮನೆಯ ಸಿಮೆಂಟ್ ಶೀಟ್ ಮತ್ತು ಹೆಂಚುಗಳು ಕೂಡಹಾನಿಯಾಗಿವೆ.

ಕೂತ್ಕುಂಜ ಗ್ರಾಮದ ಚನಿಯ ಎಂಬುವರ ಮನೆ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಮುರಿದು ಬಿದ್ದಿದೆ. ಗುರುವಾರ ಸಂಜೆ ತಹಸೀಲ್ದಾರ್ ಜಿ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳೆಗೆ ಕಾಂಪೌಂಡ್ ಕುಸಿತಗೊಂಡು ಮನೆಗೆ ಹಾನಿ ಸಂಭವಿಸಿದ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದ ದರ್ಖಾಸ್ತು ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಗೂನಡ್ಕದ ದರ್ಖಾಸ್ತು ರಸ್ತೆಯ ಬದಿಯಿರುವ ಸಿನನ್ ಜಡ್ಜ್ ಎಂಬುವರ ಕಾಂಪೌಂಡ್ ಮಳೆಗೆ ಕುಸಿದಿದ್ದು, ರಸ್ತೆ ಬ್ಲಾಕ್ ಆದುದಲ್ಲದೇ ಇದರ ಪಕ್ಕದಲ್ಲೇ ಇದ್ದ ಕೆ.ಎಸ್.ಹ್ಯಾರಿಸ್ ಎಂಬುವರ ಕಾಂಪೌಂಡ್ ಕೂಡ ಬಿದ್ದು ಮರಿಯಮ್ಮ ಎಂಬುವರ ಮನೆಗೆ ಹಾನಿಯಾಗಿದೆ.