ಬೆಂಗಳೂರು: ಕ್ವಾರಂಟೈನ್ ನಿಯಮಗಳಲ್ಲಿ ಬದಲಾವಣೆ, ಜಿಲ್ಲಾ ಕೇಂದ್ರದ ಸಾರ್ವಜನಿಕ ಆಸ್ಪತ್ರೆಗಳು ಕರೊನಾ ಆಸ್ಪತ್ರೆಗಳಾಗಿ ಮಾರ್ಪಾಡು, ತಪಾಸಣೆ ಪ್ರಮಾಣ ಹೆಚ್ಚಳ ಸೇರಿ ಕರೊನಾ ನಿಯಂತ್ರಣಕ್ಕೆ ಮತ್ತಷ್ಟು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಟಾಸ್ಕ್ ಫೋರ್ಸ್ ಸಭೆಯಲ್ಲಿ ಬೆಂಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಸೋಂಕು ನಿಯಂತ್ರಿಸಲು ವ್ಯಾಪಕ ಸಿದ್ಧತೆಗಳ ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು. ಜತೆಗೆ ನಿರ್ವಹಣಾ ಕ್ರಮಗಳಿಗೆ ಅಗತ್ಯವಾದ 500 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಯಿತು. ಕ್ವಾರಂಟೈನ್ ಕಟ್ಟುನಿಟ್ಟಾಗಿ ಜಾರಿಗೊಳಿಸುವುದಕ್ಕಾಗಿ ನಿಯಮ ಉಲ್ಲಂಘಿಸುವವರ ವಿರುದಟಛಿ ಕಠಿಣ ಕ್ರಮ, ಚಾಲ್ತಿ ನಿಯಮಗಳಲ್ಲಿ ಕೆಲ ಬದಲಾವಣೆಗಳಿಗೆ ನಿರ್ಧಾರ ಹಾಗೂ ಈ ಕುರಿತು ವಿಸõತ ಆದೇಶ ಹೊರಡಿಸುವುದಕ್ಕೆ ಸಭೆ ಸಮ್ಮತಿಸಿತು.
ಸಭೆಯ ಪ್ರಮುಖ ನಿರ್ಧಾರಗಳು 1 ಕಾಳಸಂತೆಗೆ ಕಡಿವಾಣ ಹಾಕಲು ರೆಮಿಡಿಸ್ವಿಯರ್ ಔಷಧ ವನ್ನು ಸರ್ಕಾರದ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಪೂರೈಕೆ 2 ಖಾಸಗಿ ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆಯ ಪ್ಯಾಕೇಜ್ ದರದಲ್ಲಿ ಚಿಕಿತ್ಸಾ ಸೌಲಭ್ಯ ಒದಗಿಸಲು ಮತ್ತು ಯೋಜನೆ ವ್ಯಾಪ್ತಿಗೆ ಸೇರದ ಚಿಕಿತ್ಸಾ ವಿಧಾನಗಳನ್ನು ಬಳಕೆದಾರರ ಶುಲ್ಕ ಆಧಾರದಲ್ಲಿ ನೀಡುವುದು 3 ಕರೊನಾ ನಿರ್ವಹಣೆಗೆ ವೈದ್ಯಕೀಯ ಪರಿಕರ, ಔಷಧ ಖರೀದಿಯ ಶಿಫಾರಸು ಮೇಲ್ವಿಚಾರಣೆಗೆ ಐಟಿ-ಬಿಟಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ 4 ಕರೊನಾ ನಿರ್ವಹಣೆ ಕೆಲಸದಲ್ಲಿ ನಿರತ ಆರೋಗ್ಯ ಕಾರ್ಯಕರ್ತರ ಸುರಕ್ಷತೆಗೆ ತಲಾ 2,59,263 ಎನ್-95 ಮಾಸ್ಕ್ ಹಾಗೂ ಪಿಪಿಇ ಕಿಟ್ ಖರೀದಿ 5 17 ಸರ್ಕಾರಿ ಮೆಡಿಕಲ್ ಕಾಲೇಜುಗಳ 4,736 ಹಾಸಿಗೆಗಳಿಗೆ ಆಕ್ಸಿಜನ್ ಪೈಪ್ ಅಳವಡಿಕೆ ಮತ್ತು ಇತರ ಪರಿಕರಗಳ ಖರೀದಿ 6 ದಿನಕ್ಕೆ 50,000 ಟೆಸ್ಟ್ಗಳ ಗುರಿ ಮುಟ್ಟಲು ಹೊಸದಾಗಿ 16 ಆರ್ಟಿ- ಪಿಸಿಆರ್ ಮತ್ತು 15 ಆಟೋಮೇಟೆಡ್ ಆರ್ಎನ್ಎ ಪ್ರಯೋಗಾಲಯಗಳ ಸ್ಥಾಪನೆ
ತಪಾಸಣೆ ಪ್ರಮಾಣ ಹೆಚ್ಚಳ: ಸೋಂಕು ತಡೆಗಟ್ಟಲು ಹಾಗೂ ಮರಣ ಪ್ರಮಾಣ ತಗ್ಗಿಸುವುದಕ್ಕೆ ಹೆಚ್ಚೆಚ್ಚು ತಪಾಸಣೆ ಹಾಗೂ ತ್ವರಿತ ವರದಿ ಪಡೆಯುವುದು ಮುಖ್ಯವಾಗಿದ್ದು, ರ್ಯಾಪಿಡ್ ಆಂಟಿಜನ್ (ಪ್ರತಿಜನಕ) ಟೆಸ್ಟ್ ತಕ್ಷಣದ ಪರಿಹಾರ ಮಾರ್ಗವಾಗಿದೆ ಎಂದು ಸಭೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರ್ಯಾಪಿಡ್ ಆಂಟಿಜನ್ ಟೆಸ್ಟ್ ಕಿಟ್ ಬಳಸಿ 30 ನಿಮಿಷಗಳಲ್ಲಿ ವರದಿ ಪಡೆಯಲು ಸಾಧ್ಯವಿದೆ. ಹೀಗಾಗಿ ಈಗಿರುವ 1 ಲಕ್ಷ ಜತೆಗೆ ಮತ್ತೆ ಹೆಚ್ಚುವರಿ 4 ಲಕ್ಷ ಟೆಸ್ಟ್ ಕಿಟ್ ಖರೀದಿಸಿ, ಬೆಂಗಳೂರು ಮಾತ್ರವಲ್ಲದೆ, ಎಲ್ಲ ಜಿಲ್ಲೆಗಳಿಗೂ ವಿತರಿಸಲು ನಿರ್ಧರಿಸಲಾಗಿದೆ. ಸಮಿತಿ ವರದಿ ನಂತರ ಕ್ರಮ ಸೋಂಕಿತರ ರೋಗ ನಿರೋಧಕ ಶಕ್ತಿ ವೃದ್ಧಿಗೆ ಕೆಲಕ್ರಮಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಆಯುಷ್ ಇಲಾಖೆ ಸಲ್ಲಿಸಿದೆ. ಇದನ್ನು ಉನ್ನತಮಟ್ಟದ ಸಮಿತಿಗೆ ಒಪ್ಪಿಸಿದ್ದು, ಪ್ರಸ್ತಾವನೆ ಪರಿಶೀಲಿಸಿ ಮುಂದಿನ ವಾರ ವರದಿ ನೀಡಲಿದೆ. ನಂತರ ಈ ಬಗ್ಗೆ ಟಾಸ್ಕ್ಫೋರ್ಸ್ ಸಭೆಯಲ್ಲಿ ರ್ಚಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸುಧಾಕರ್ ಹೇಳಿದರು.
ಅರ್ಧಕ್ಕೆ ಹೊರನಡೆದ ಶ್ರೀರಾಮುಲು!: ಟಾಸ್ಕ್ಫೋರ್ಸ್ ಸಭೆಯ ಅಧ್ಯಕ್ಷತೆವಹಿಸಿದ್ದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಮಧ್ಯದಲ್ಲೇ ಎದ್ದು ನಡೆದಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ ಶ್ರೀರಾಮುಲು ಅವರು ಮುಷ್ಕರನಿರತ ಆಯುಷ್ ವೈದ್ಯರನ್ನು ಭೇಟಿ ಮಾಡಲು ತೆರಳಿದ್ದರೆಂದು ಹೇಳಲಾಗಿದೆ. ಅಲ್ಲಿಂದ ನೇರವಾಗಿ ಸಿಎಂ ಭೇಟಿಗೆ ತೆರಳಿದರೆಂದು ಮೂಲಗಳು ಖಚಿತಪಡಿಸಿವೆ.
ಇದನ್ನೂ ಓದಿ: ಒಂದಿಷ್ಟು ಶುಲ್ಕ ಪಾವತಿಸಿದ್ರೆ 2 ಕೋಟಿ ನಿಮ್ದಾಗುತ್ತೆ, ಯಾಕೆ ಕಳ್ಕೋತೀರಿ? ಎಂದು ಹೇಳ್ತಾನೇ ವಂಚಿಸಿದ್ರು ನೋಡಿ..!
8 ಪ್ರಮುಖ ನಿರ್ಣಯಗಳು: 8 ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು. 35 ಲಕ್ಷ ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕಿಟ್ ಹಾಗೂ ಮಾಸ್ಕ್ಗಳ ಖರೀದಿಗೆ ಸಭೆ ಅನುಮೋದಿಸಿದೆ. ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳನ್ನು ಕರೊನಾ ಆಸ್ಪತ್ರೆಗಳನ್ನಾಗಿ ಮಾರ್ಪಡಿಸಿ, ಜಿಲ್ಲಾ ಕೇಂದ್ರದ ಖಾಸಗಿ ಆಸ್ಪತ್ರೆಗಳನ್ನು ಇತರ ರೋಗಿಗಳಿಗೆ ಉಪಯೋಗಿಸಲು ನಿರ್ಧರಿಸಲಾಗಿದೆ ಎಂದರು.
ಇದನ್ನೂ ಓದಿ: ನಾನೆಲ್ಲಿ 35 ಕೋಟಿ ರೂಪಾಯಿ ತಗೊಂಡೆ- ಮಿಥ್ಯಾರೋಪಕ್ಕೆ ಕಾನೂನು ಕ್ರಮ ಖಚಿತ: ಎಚ್ಚರಿಸಿದ್ರು ಸಚಿನ್ ಪೈಲೆಟ್
ಖಾಸಗಿ ಆಸ್ಪತ್ರೆಗಳಿಗೆ ಎಚ್ಚರಿಕೆ: ಸಂಕಷ್ಟ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳು ದುಬಾರಿ ಹಣ ವಸೂಲಿ ಮಾಡಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣೆ, ಕೆಪಿಎಂಇ, ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಕ್ರಮ ಜರುಗಿಸಲು ಸರ್ಕಾರ ಹಿಂಜರಿಯುವುದಿಲ್ಲವೆಂದು ಸುಧಾಕರ್ ಖಡಕ್ ಎಚ್ಚರಿಕೆ ನೀಡಿದರು. ಸಂಘರ್ಷದ ಹಾದಿ ಬೇಡ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕು ಎನ್ನುವುದು ಸಿಎಂ ಬಿ.ಎಸ್.ಯಡಿಯೂರಪ್ಪ ಇಚ್ಛೆಯಾಗಿದ್ದು, ಅದರಂತೆಯೇ ಹಂತ ಹಂತವಾಗಿ ಕ್ರಮವಹಿಸಲಾಗುವುದು ಎಂದರು.
ತಾಯಿ ಮತ್ತು ಮಕ್ಕಳ ವಿಭಾಗ ಬಿಟ್ಟು ಉಳಿದೆಲ್ಲ ಹಾಸಿಗೆಗಳನ್ನು ನೀಡಲು ಖಾಸಗಿ ಆಸ್ಪತ್ರೆಗಳು ಮುಂದೆ ಬಂದಿದ್ದವು. ಆದರೆ ಶೇ.50 ಹಾಸಿಗೆಗಳನ್ನು ಸರ್ಕಾರ ಪಡೆದುಕೊಳ್ಳಲಿದ್ದು, ಉಳಿದ ಹಾಸಿಗೆಗಳನ್ನು ಬೇರೆ ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಬಳಸಿಕೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲವೆಂದು ತಿಳಿಸಿದರು.
ಇದನ್ನೂ ಓದಿ: VIDEO: ಅಪಾಯದಲ್ಲಿದೆ ಮಧ್ಯ ಚೀನಾ!
ದರ ಇಳಿಕೆ: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಪರೀಕ್ಷಾ ದರವನ್ನು ಇಳಿಕೆ ಮಾಡಲಾಗಿದೆ. ಸರ್ಕಾರ ಶಿಫಾರಸು ಮಾಡಿದವರಿಗೆ 2,000 ರೂ., ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಟೆಸ್ಟ್ ಮಾಡಿಸಿದರೆ 3,000 ರೂ. ನಿಗದಿಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಆಯುಷ್ ವೇತನ ಹೆಚ್ಚಳ: ಆಯುಷ್ ವೈದ್ಯರ ವೇತನ ಹೆಚ್ಚಳದ ಬೇಡಿಕೆಗೆ ಸ್ಪಂದಿಸಿದ್ದು, 48,000 ರೂ.ಗೆ ವೇತನ ಹೆಚ್ಚಳವಾಗಲಿದೆ. ಹಾಗೆಯೇ 6 ತಿಂಗಳ ಮಟ್ಟಿಗೆ ಶುಶ್ರೂಷಕರ ಸಂಬಳವನ್ನು 30,000 ರೂ.ಗೆ ಏರಿಸಲು ನಿರ್ಧರಿಸಿದ್ದು, ಬಿಬಿಎಂಪಿ, ಆರೋಗ್ಯ, ಆಯುಷ್ನ ಎಲ್ಲ ನರ್ಸ್ಗಳಿಗೆ ಅನ್ವಯಿಸುತ್ತದೆ.
ಸದ್ಯಕ್ಕೆ ನರ್ಸ್ಗಳು 15,000 ರೂ. ವೇತನ ಪಡೆಯುತ್ತಿದ್ದಾರೆ. ಕರೊನಾ ಕಾರ್ಯ ನಿರ್ವಹಿಸಲು ತಾತ್ಕಾಲಿಕವಾಗಿ ನೇಮಕವಾಗುವ ಎಂಬಿಬಿಎಸ್ ವೈದ್ಯರಿಗೆ ಮಾಸಿಕ 80,000 ರೂ. ವೇತನ ನೀಡಲು ತೀರ್ಮಾನಿಸಿದ್ದು, ಸೌಲಭ್ಯಗಳ ಸೃಜನೆಯೊಂದಿಗೆ ರೋಗಿಗಳ ಚಿಕಿತ್ಸೆಗೆ ಬೇಕಾದ ವೈದ್ಯರು, ಶುಶ್ರೂಷಕರ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಿದೆ ಎಂದು ಸುಧಾಕರ್ ತಿಳಿಸಿದರು.