ಜಿಲ್ಲೆ

ಬಾಲಕಿಯಿಂದಾಗಿ ಜೆಡಿಎಸ್​ ಶಾಸಕ ಸಿ.ಎಸ್​.ಪುಟ್ಟರಾಜು ಸ್ವಗ್ರಾಮ ಕಂಪ್ಲೀಟ್​ ಸೀಲ್​ ಡೌನ್​!

ಮಂಡ್ಯ: ಕರೊನಾ ಸೋಂಕಿತ ಬಾಲಕಿಯಿಂದಾಗಿ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಸಿ.ಎಸ್​. ಪುಟ್ಟರಾಜು ಅವರ ಸ್ವಗ್ರಾಮವನ್ನು ಸಂಪೂರ್ಣ ಸೀಲ್​ ಡೌನ್​ ಮಾಡಲಾಗಿದೆ.

ರಾಣೆಬೆನ್ನೂರಿನಿಂದ ಬಂದಿದ್ದ 11 ವರ್ಷದ ಬಾಲಕಿಗೆ ಕರೊನಾ ಹಿನ್ನೆಲೆಯಲ್ಲಿ ಪುಟ್ಟರಾಜು ಅವರ ಸ್ವಗ್ರಾಮ ಪಾಂಡವಪುರ ತಾಲೂಕಿನ ಚಿನಕುರುಳಿಗೆ ದಿಗ್ಬಂಧನ ವಿಧಿಸಲಾಗಿದೆ.

ಲಾಕ್​​​ಡೌನ್ ಸಡಿಲಿಕೆ ಬಳಿಕ ಕುಟುಂಬದೊಂದಿಗೆ ಬಾಲಕಿ ಗ್ರಾಮಕ್ಕೆ ಬಂದಿದ್ದಳು. ಗಂಟಲು ದ್ರವದ ಪರೀಕ್ಷೆಯಲ್ಲಿ ಬಾಲಕಿಗೆ ಸೋಂಕು ಇರುವುದು ದೃಢವಾಗಿತ್ತು. ಇದೀಗ ಚಿನಕುರಳಿಯಲ್ಲಿ ಆತಂಕ ಮನೆ ಮಾಡಿದ್ದು, ಅಧಿಕಾರಿಗಳು ಚಿನಕುರುಳಿ ರಸ್ತೆಗಳನ್ನು ಬಂದ್ ಮಾಡಿಸಿದ್ದಾರೆ.

ಮರದ ಕಂಬಗಳನ್ನು ರಸ್ತೆಯಲ್ಲಿ ಕಟ್ಟಿ ಸಂಪೂರ್ಣ ಬ್ಲಾಕ್ ಮಾಡಿ, ಗ್ರಾಮದಿಂದ ಹೊರಗೆ ಹಾಗೂ ಒಳಗಿನ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನೆಮ್ಮದಿಯಾಗಿದ್ದ ಗ್ರಾಮದಲ್ಲಿ ಬಾಲಕಿಗೆ ಸೊಂಕು ದೃಢಪಡುತ್ತಿದ್ದಂತೆ ಕರೊನಾ ಆತಂಕ ಶುರುವಾಗಿದೆ. (ದಿಗ್ವಿಜಯ ನ್ಯೂಸ್​)