More

    ಮದುವೆ ಆಗುವುದಾಗಿ ನಂಬಿಸಿ ಧೋಖಾ: ಇಬ್ಬರು ಮಹಿಳೆಯರಿಗೆ 63 ಲಕ್ಷ ರೂ. ವಂಚನೆ

    ಬೆಂಗಳೂರು: ಮ್ಯಾಟ್ರಿಮೋನಿಯಲ್ ವೆಬ್​ಸೈಟ್​ನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡಿದ್ದ ಯುವಕರು, ಮದುವೆಯಾಗುವುದಾಗಿ ನಂಬಿಸಿ ಉಡುಗೊರೆ ಆಮಿಷವೊಡ್ಡಿ ಲಕ್ಷಾಂತರ ರೂ. ಪಡೆದು ವಂಚಿಸಿರುವ ಎರಡು ಪ್ರತ್ಯೇಕ ಪ್ರಕರಣಗಳು ಬೆಳಕಿಗೆ ಬಂದಿವೆ.

    ಜಯನಗರದ ನಿವಾಸಿ 49 ವರ್ಷದ ಮಹಿಳೆ ಹಾಗೂ ಜಾಲಹಳ್ಳಿ ನಿವಾಸಿ 38 ವರ್ಷದ ಮಹಿಳೆ ವಂಚನೆಗೊಳಗಾದವರು. ಅವರು ನೀಡಿದ ದೂರಿನ ಮೇರೆಗೆ ದಿನೇಶ್ ಆಚಾರ್ಯ ಮತ್ತು ಅರ್ಚನಾ ಹಾಗೂ ಆದಿತ್ಯ ಲಘಾರಿ ಎಂಬುವರ ವಿರುದ್ಧ ಸೈಬರ್ ಕ್ರೖೆಂ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಲಾಕ್​ಡೌನ್​: ಕರೊನಾ ಕುರಿತು ಮತ್ತೊಂದು ಶಾಕಿಂಗ್​ ವರದಿ ನೀಡಿದ ಚೀನಾ ವೈದ್ಯರು!

    ಜಯನಗರದ ಮಹಿಳೆ ಮ್ಯಾಟ್ರಿಮೋನಿಯಲ್​ನಲ್ಲಿ ನೋಂದಣಿ ಮಾಡಿಸಿದ್ದರು. ದಿನೇಶ್ ಆಚಾರ್ಯ ಎಂಬಾತ ಮದುವೆಯಾಗುವುದಾಗಿ ಪರಿಚಯಿಸಿಕೊಂಡಿದ್ದ. ಬಳಿಕ ಇಬ್ಬರು ಫೋನ್ ನಂಬರ್ ಹಂಚಿಕೊಂಡಿದ್ದು, ಪ್ರತಿದಿನ ಕರೆ ಮಾಡಿ ಕುಶಲೋಪರಿ ವಿಚಾರಿಸುವ ಸೋಗಿನಲ್ಲಿ ನಂಬಿಕೆ ಗಿಟ್ಟಿಸಿಕೊಂಡಿದ್ದ. ತನ್ನ ತಂದೆ ಮಲೇಷ್ಯಾದಲ್ಲಿ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. 3 ವರ್ಷದ ಹಿಂದೆ ಆಕಸ್ಮಿಕವಾಗಿ ಮೃತಪಟ್ಟರು. ಕಂಪನಿಯಿಂದ ತಂದೆ ಹೆಸರಿಗೆ ಹಣ ಬರಬೇಕಿದೆ. ಹಣ ಪಡೆಯಲು ಮಲೇಷ್ಯಾಗೆ ಹೋಗುತ್ತಿರುವುದಾಗಿ ತಿಳಿಸಿದ್ದ.

    ಇದಾದ ಎರಡು ದಿನಗಳ ಬಳಿಕ, ಕಂಪನಿಯವರು ಚೆಕ್ ಕೊಟ್ಟಿದ್ದಾರೆ. ಆದರೆ, ಬ್ಯಾಂಕ್​ನವರು ಹಣ ನೀಡಲು ಹಲವು ರೀತಿಯ ಶುಲ್ಕ ಪಾವತಿಸುವಂತೆ ಹೇಳುತ್ತಿದ್ದಾರೆ ಎಂದಿದ್ದ. ಆತನ ಮಾತನ್ನು ನಂಬಿದ ಮಹಿಳೆ 5.65 ಲಕ್ಷ ರೂ. ವರ್ಗಾಯಿಸಿದ್ದರು. ಮರುದಿನ ಬೆಳಗ್ಗೆ ಅರ್ಚನಾ ಎಂಬ ಹೆಸರಿನಲ್ಲಿ ಕರೆ ಮಾಡಿದ್ದ ಮಹಿಳೆ, ತಾನು ದೆಹಲಿ ವಿಮಾನ ನಿಲ್ದಾಣದ ಕಸ್ಟಮ್್ಸ ಕಚೇರಿ ಸಿಬ್ಬಂದಿ ಎಂದು ಪರಿಚಯ ಮಾಡಿಕೊಂಡಿದ್ದಾಳೆ.

    ಇದನ್ನೂ ಓದಿ: ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?​

    ‘ನಿಮಗೆ ಪರಿಚಯವಿರುವ ವ್ಯಕ್ತಿ ಮಲೇಷ್ಯಾದಿಂದ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರು ತಂದಿರುವ ಹಣಕ್ಕೆ 75 ಸಾವಿರ ರೂ. ಶುಲ್ಕ ಪಾವತಿಸಬೇಕು’ ಎಂದಿದ್ದಾಳೆ. ಬೇರೆಬೇರೆ ರೀತಿ ವಂಚಿಸುತ್ತಿದ್ದಾರೆ ಎಂಬುದು ಗೊತ್ತಾಗಿ ಮಹಿಳೆ ದೂರು ಕೊಟ್ಟಿದ್ದಾರೆ. ದಿನೇಶ್ ಆಚಾರ್ಯ ಮತ್ತು ಅರ್ಚನಾ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗ ಸೈಬರ್ ಕ್ರೖೆಂ ಪೊಲೀಸರು ತಿಳಿಸಿದ್ದಾರೆ.

    ಉಡುಗೊರೆ ಆಮಿಷವೊಡ್ಡಿ 57 ಲಕ್ಷ ರೂ. ಮೋಸ

    ಮತ್ತೊಂದು ಪ್ರಕರಣದಲ್ಲಿ ಜಾಲಹಳ್ಳಿ ನಿವಾಸಿ ಮಹಿಳೆಗೆ ಮ್ಯಾಟ್ರಿಮೋನಿಯಲ್ ವೆಬ್​ಸೈಟ್ ಮೂಲಕ ಆದಿತ್ಯ ಲಘಾರಿ ಎಂಬ ಹೆಸರಿನಲ್ಲಿ ಮದುವೆಯಾಗುವುದಾಗಿ ಪರಿಚಯಿಸಿಕೊಂಡಿದ್ದ. ತಾನು ಲಂಡನ್​ನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಮದುವೆಯಾದ ಬಳಿಕ ಲಂಡನ್​ನಲ್ಲೇ ಜೀವನ ನಡೆಸೋಣ ಎಂದು ನಂಬಿಸಿ ಹಂತಹಂತವಾಗಿ ಲಕ್ಷಾಂತರ ರೂ. ಪಡೆದುಕೊಂಡಿದ್ದ. ಬಳಿಕ ಆಕೆಗೆ ನಿನ್ನ ಹೆಸರಿನಲ್ಲಿ ಉಡುಗೊರೆ ಪಾರ್ಸೆಲ್ ಕಳುಹಿಸುತ್ತಿದ್ದೇನೆ. ಅದನ್ನು ಸ್ವೀಕರಿಸುವಂತೆ ಸೂಚಿಸಿದ್ದ. ಇದಾದ ಕೆಲ ದಿನಗಳ ಬಳಿಕ ಕಸ್ಟಮ್್ಸ ಕಚೇರಿ ಕಚೇರಿ ಹೆಸರಿನಲ್ಲಿ, ‘ಪಾನ್ ಕಾರ್ಡ್ ಪ್ರತಿ ಕೊಟ್ಟು, ಆದಿತ್ಯ ಅವರು ಕಳುಹಿಸಿರುವ ಚಿನ್ನದ ಬಳೆ, ಚಿನ್ನದ ಸರ, 40 ಸಾವಿರ ಪೌಂಡ್ ಹಣವನ್ನು ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ. ಈ ಮಾತನ್ನು ನಂಬಿ ಹಣ ಪಾವತಿಸಿದ್ದಾರೆ. ಇದಾದ ನಂತರ ಉಡುಗೊರೆ ಕೈ ಸೇರಿಲ್ಲ. ಬಳಿಕ ಆದಿತ್ಯನನ್ನು ವಿಚಾರಿಸಲು ಕರೆ ಮಾಡಿದ್ದು ಸಂಪರ್ಕಕ್ಕೆ ಸಿಗದೇ ಇದ್ದಾಗ ವಂಚಿಸಿರುವುದು ಗೊತ್ತಾಗಿದೆ. ಹಂತಹಂತವಾಗಿ ಒಟ್ಟು 57.89 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಸಂತ್ರಸ್ತ ಮಹಿಳೆ ದೂರು ಕೊಟ್ಟಿದ್ದಾರೆ ಎಂದು ಉತ್ತರ ವಿಭಾಗ ಸೈಬರ್ ಕ್ರೖೆಂ ಪೊಲೀಸರು ಮಾಹಿತಿ ನೀಡಿದ್ದಾರೆ.

    ಫ್ಯಾಶನ್​ ಡಿಸೈನರ್​ ಮಸಬಾರೊಂದಿಗೆ ಗೋವಾದಲ್ಲಿ ಲಾಕ್​ ಆಗಿರುವ ಬಾಲಿವುಡ್​ ನಟನ್ಯಾರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts