ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಹೆಚ್ಚಾಗಿದೆ. ನಿಮ್ಮ ಕೈಗಳನ್ನು ಆಗಾಗ ತೊಳೆಯುತ್ತಿರಿ, ನೀವು ಬಳಸುವ ವಸ್ತುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ ಎನ್ನುವ ಮಾಹಿತಿ ಎಲ್ಲೆಡೆ ಹಂಚಿಕೆಯಾಗುತ್ತಿದೆ. ಆದರೆ ಪ್ರತಿನಿತ್ಯ ಅತಿ ಹೆಚ್ಚು ಸಮಯ ನಿಮ್ಮೊಂದಿಗೆ ಕಳೆಯುವ ನಿಮ್ಮ ಮೊಬೈಲ್ ಫೋನ್ಗಳ ಬಗ್ಗೆ ಹೆಚ್ಚಿನ ಗಮನವೇ ಹರಿದಿಲ್ಲ.
ಯೂನಿವರ್ಸಿಟಿ ಆಫ್ ಆರಿಜೋನಾ ನಡೆಸಿರುವ ಸಂಶೋಧನೆಯ ಪ್ರಕಾರ ಪ್ರತಿ ಮೊಬೈಲ್ ಫೋನ್ಗಳು ಸಹ ಟಾಯ್ಲೆಟ್ ಶೀಟ್ಗಿಂತ 10 ಪಟ್ಟು ಹೆಚ್ಚು ಕ್ರಿಮಿಗಳನ್ನು ಹೊಂದಿರುತ್ತದೆ. ಟಾಯ್ಲೆಟ್ನ ಸ್ವಚ್ಛತೆಗಾಗಿ ಹಾರ್ಪಿಕ್, ಡೋಮೆಕ್ಸ್ಗಳಂತ ಕ್ಲೀನರ್ಗಳ ಮೊರೆ ಹೋಗುವ ನಾವು ಮೊಬೈಲ್ಗಳನ್ನು ಮಾತ್ರ ಅತ್ಯಾಪ್ತವಾಗಿ ಪಾಕೆಟ್ನಲ್ಲೇ ಇರಿಸಿಕೊಂಡಿದ್ದೇವೆ. ಈ ಮೊಬೈಲ್ಗಳಲ್ಲಿ ಕ್ರಿಮಿಗಳು ಬಹುಬೇಗವಾಗಿ ಶೇಖರಣೆಗೊಂಡು ನಿಮಗೆ ಕೊರೊನಾ ವೈರಸ್ ಬರುವಂತೆ ಮಾಡಬಹುದು. ಒಂದು ವೇಳೆ ನಿಮ್ಮ ಮೊಬೈಲ್ ಸ್ಕ್ರೀನ್ಗೆ ಕೊರೊನಾ ವೈರಸ್ ತಗುಲಿದರೆ ಅದು ನಾಲ್ಕು ದಿನಗಳ ಕಾಲ ಜೀವಂತವಾಗಿದ್ದು ನಿಮಗೆ ಕೊರೊನಾ ತರಬಲ್ಲದ್ದಾಗಿದೆ. ಕೇವಲ ಮೊಬೈಲ್ ಸ್ಕ್ರೀನ್ ಮಾತ್ರವಲ್ಲ, ಯಾವುದೇ ಗ್ಲಾಸ್ನ ಮೇಲೆ ವೈರಸ್ ತಗುಲಿದರೂ ಅದು 96 ಗಂಟೆಗಳ ಕಾಲ ರೋಗವನ್ನು ಹರಡಬಲ್ಲದ್ದಾಗಿದೆ. ಹಾಗಾದರೆ ಮೊಬೈಲ್ಗಳಿಂದ ಕೊರೊನಾ ತಡೆಗಟ್ಟುವುದು ಹೇಗೆ? ಮುಂದೆ ಓದಿ...
ಇದೆಲ್ಲಕ್ಕಿಂತ ಉತ್ತಮ ರೀತಿಯಲ್ಲಿ ನಿಮ್ಮ ಫೋನ್ ಸ್ವಚ್ಛ ಮಾಡಬೇಕೆಂದರೆ ನೀವು ಯುವಿ ಸ್ಮಾರ್ಟ್ಫೋನ್ ಕ್ಲೀನರ್ನ್ನು ಬಳಸಬಹುದು. ಆನ್ಲೈನ್ ಮಾರುಕಟ್ಟೆಯಲ್ಲಿ ಸಿಗುವ ಯುವಿ ಸ್ಮಾರ್ಟ್ಫೋನ್ ಕ್ಲೀನರ್ನಲ್ಲಿ ಯುವಿ ಕಿರಣಗಳ ಮೂಲಕ ನಿಮ್ಮ ಫೋನನ್ನು ಸ್ವಚ್ಛ ಮಾಡಲಾಗುವುದು. (ಏಜೆನ್ಸೀಸ್)