ಜಿಲ್ಲೆ

ಯಕ್ಷಗಾನದಲ್ಲಿ ನಿರಂತರ ಕಲಾಸೇವೆ ಅನನ್ಯ

ಇಂದಿರಾ ಎನ್ ಕೆ

ಕೋಟ: ಯಕ್ಷಗಾನದಲ್ಲಿ ನಿರಂತರ ಒಂದೇ ಮೇಳದಲ್ಲಿ ಸೇವೆ ಸಲ್ಲಿಸುವುದು ಸುಲಭದ ಮಾತಲ್ಲ. ಕಲಾವಿದರಿಗೆ ಇರುವ ಜ್ಞಾನ, ಕಲಾರಾಧನೆ ಬಹು ಎತ್ತರಕ್ಕೆ ಕೊಂಡೊಯ್ಯಬಲ್ಲದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕೋಟತಟ್ಟು ಬಾರಿಕೆರೆ ಗ್ರಾಮಸ್ಥರ ವತಿಯಿಂದ ಕೋಟ ಅಮೃತೇಶ್ವರಿ ದಶಾವತಾರ ಮೇಳದ ಹರಕೆಯ ಸೇವೆಯಾಟದಲ್ಲಿ ಯಕ್ಷಕಲಾವಿದ ಕೋಟ ವೈಕುಂಠ ಪ್ರಶಸ್ತಿಯನ್ನು ಹಿರಿಯ ಯಕ್ಷಕಲಾವಿದ ಸೀತಾರಾಮ ಹೆಗಡೆ ಅವರಿಗೆ ಪ್ರದಾನಿಸಿ ಮಾತನಾಡಿದರು.

ಕೋಟ ಅಮೃತೇಶ್ವರಿ ದೇಗುಲದ ಆಡಳಿತ ಟ್ರಸ್ಟಿ ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಕೋಟತಟ್ಟು ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್, ಉಪಾಧ್ಯಕ್ಷೆ ಸರಸ್ವತಿ ಪೂಜಾರಿ, ಗ್ರಾಮದ ಹಿರಿಯರಾದ ಒಳಮಾಡು ಸೋಮ ಮರಕಾಲ, ರಾಜು ಮರಕಾಲ, ಸುರೇಶ್ ಕಾಂಚನ್, ನರಸಿಂಹ ತಿಂಗಳಾಯ, ರಂಜಿತ್ ಕುಮಾರ್ ಉಪಸ್ಥಿತರಿದ್ದರು. ದೇಗುಲದ ಟ್ರಸ್ಟಿ ಚಂದ್ರಶೇಖರ್ ಆಚಾರ್ ಸ್ವಾಗತಿಸಿ, ನಿರೂಪಿಸಿದರು.