ಕೇಶವಮೂರ್ತಿ ವಿ.ಬಿ. ಹಾವೇರಿ
ಹಾನಗಲ್ಲ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧಿತರಾದ ಕೆಲ ಆರೋಪಿಗಳು ಸೀಕ್ರೆಟ್ ಕೋಡ್ವರ್ಡ್ಗಳನ್ನು ಬಳಸಿ ನೈತಿಕ ಪೊಲೀಸ್ಗಿರಿಗೆ ಇಳಿದಿದ್ದರು. ಜನನಿಬಿಡ ಪ್ರದೇಶಗಳಲ್ಲಿ ತಮ್ಮವರನ್ನು ಬಿಟ್ಟು ಬಹುದೊಡ್ಡ ನೆಟ್ವರ್ಕ್ ಸೃಷ್ಟಿಸಿಕೊಂಡಿದ್ದರು. ಯುವಕ- ಯುವತಿಯರ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ವೆುೕಲ್ ಮಾಡುತ್ತಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.
ಗ್ಯಾಂಗ್ರೇಪ್ ಕೇಸ್ನಲ್ಲಿ ಬಂಧಿತ ತಂಡಕ್ಕೆ ‘ಝುಡ್’ ಎಂದು ಹೆಸರಿದ್ದರೆ, ಉಳಿದವಕ್ಕೆ ಈಗಲ್, ಎಕ್ಸ್, ವೈ, ಝುಡ್.. ಎಂಬಿತ್ಯಾದಿ ಹೆಸರಿತ್ತು. ಉಳಿದಂತೆ ಹಾವೇರಿ, ಬ್ಯಾಡಗಿ, ಮತ್ತಿತರ ಪ್ರದೇಶಗಳಲ್ಲೂ ಕಾರ್ಯಾಚರಿಸುತ್ತಿತ್ತು. ತಮ್ಮದೇ ಸಮುದಾಯದ ಯುವತಿಯರ ರಕ್ಷಣೆ ಹೆಸರಲ್ಲಿ ನೆಟ್ವರ್ಕ್ ಸೃಷ್ಟಿಸಿಕೊಂಡು ತಮ್ಮವರಿಗೇ ವಂಚಿಸುತ್ತಿದ್ದರು. ಯುವತಿ ಬೇರೆಯವರೊಂದಿಗೆ ಮಾತನಾಡಿದರೆ, ಬೈಕ್ನಲ್ಲಿ ಕಂಡರೆ ಕ್ಷಣಾರ್ಧದಲ್ಲಿ ಈ ತಂಡಗಳು ಹಾಜರಾಗುತ್ತಿದ್ದವು. ಅವರ ಮೇಲೆ ಹಲ್ಲೆ ನಡೆಸುತ್ತಿದ್ದವು. ಖಾಕಿಪಡೆ ಇದಕ್ಕೆ ಕಡಿವಾಣ ಹಾಕಿದ್ದರೆ ಜ.8ರಂದು ಗ್ಯಾಂಗ್ರೇಪ್ ನಡೆಯುತ್ತಿರಲಿಲ್ಲ ಎಂಬದು ಸ್ಥಳೀಯರ ಅನಿಸಿಕೆ.
ಗ್ಯಾಂಗ್ರೇಪ್ ನಡೆದ ಬಳಿಕ ಜ.4ರಂದು ನಡೆದಿದ್ದ ಮತ್ತೊಂದು ಪ್ರಕರಣ ಹೊರಬಂತು. ನಂತರ ಬ್ಯಾಡಗಿಯಲ್ಲಿ ಜ.19ರಂದು ಮತ್ತೊಂದು ಕೇಸ್ ವರದಿಯಾಯಿತು. ಮೇಲಿಂದ ಮೇಲೆ ನೈತಿಕ ಪೊಲೀಸ್ಗಿರಿ ನಡೆದರೂ ಖಾಕಿಪಡೆ ಇದಕ್ಕೆ ಅಂಕುಶ ಹಾಕುವಲ್ಲಿ ಎಡವುತ್ತಿದೆ. ಇದೇ ಕಾರಣಕ್ಕೆ ಈ ದುಷ್ಟರು ಉಪಟಳ ಮಿತಿಮೀರಿತ್ತು. ವಿಡಿಯೋ ಮಾಡಿಟ್ಟುಕೊಳ್ಳುವುದರಿಂದ ಮಾನ, ಮರ್ಯಾದೆಗೆ ಅಂಜುವ ಯುವಕ- ಯುವತಿಯರು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ, ದೂರು ಕೊಡುವುದಿಲ್ಲ ಎಂಬ ಭಂಡಧೈರ್ಯ ಈ ದುಷ್ಟರು ಮತ್ತಷ್ಟು ಅನಾಚಾರ ನಡೆಸುವುದಕ್ಕೆ ಕುಮ್ಮಕ್ಕು ನೀಡಿತ್ತು ಎಂದು ನಾಗರಿಕರು ಆರೋಪಿಸುತ್ತಾರೆ.
ಸುಲಿಗೆಗೂ ಸೈ: ನೈತಿಕ ಪೊಲೀಸ್ಗಿರಿ, ಗ್ಯಾಂಗ್ ರೇಪ್ ಬೆಳಕಿಗೆ ಬಂದ ನಂತರ ಇದೀಗ ಅತ್ಯಾಚಾರಿಗಳ ಮತ್ತೊಂದು ಮುಖವಾಡ ಕಳಚಿದೆ. ಗ್ಯಾಂಗ್ರೇಪ್ಗೂ ಮುನ್ನ ವ್ಯಕ್ತಿಯ ಬಳಿ ಇದ್ದ ಚಿನ್ನದ ಸರ, ಮೊಬೈಲ್ ಹಾಗೂ 15,000 ನಗದು ಸುಲಿಗೆ ಮಾಡಿದ್ದಾರೆ. ಜ.4ರಂದು ನಡೆದ ಘಟನೆಯಲ್ಲೂ ಯುವಕನಿಂದ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗ್ಯಾಂಗ್ ರೇಪ್ ಆರೋಪಿತರ ಮೊಬೈಲ್ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅವರು ತಂಡಗಳನ್ನು ರಚಿಸಿಕೊಂಡು, ಕೋಡ್ ವರ್ಡ್ಗಳ ಮೂಲಕ ಸಂವಹನ ನಡೆಸುತ್ತಿದ್ದರೇ ಎಂಬುದು ಮೊಬೈಲ್ನಲ್ಲಿನ ಡೇಟಾ ಪರಿಷ್ಕರಣೆ ಬಳಿಕ ಬಳಿಕ ಗೊತ್ತಾಗಲಿದೆ.
| ಸಿ. ಗೋಪಾಲ ಎಎಸ್ಪಿ ಹಾಗೂ ತನಿಖಾಧಿಕಾರಿ