ವಿಜಯವಾಣಿ ಸುದ್ದಿಜಾಲ ನೆಲ್ಯಾಡಿ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಬುಧವಾರ ಇಚಿಲಂಪಾಡಿ ನೇರ್ಲ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ ಮಾಡಲಾಯಿತು. ಶಾಲೆಯ ಸುತ್ತಮುತ್ತ ಸ್ವಚ್ಛತೆ, ಶಾಲೆಯ ಮೇಲ್ಛಾವಣಿ ಮೇಲೆ ಬಾಗಿದ್ದ ಮರದ ಕೊಂಬೆಗಳನ್ನು ಕಡಿಯಲಾಯಿತು. ಶ್ರಮದಾನದಲ್ಲಿ 16 ಸ್ವಯಂಸೇವಕರು ಭಾಗವಹಿಸಿದ್ದರು.
ಶ್ರಮದಾನದ ನಂತರ ಮಾಸಿಕ ಸಭೆಯನ್ನು ಘಟಕ ಪ್ರತಿನಿಧಿ ರಮೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ವಲಯ ಮೇಲ್ವಿಚಾರಕರಾದ ಆನಂದರವರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಅಧ್ಯಕ್ಷತೆ ವಹಿಸಿದ ರಮೇಶ್ ಬಾಣಜಾಲು ಘಟಕಕ್ಕೆ ಹೊಸದಾಗಿ ಸೇರ್ಪಡೆಗೊಳ್ಳುವ ಸದಸ್ಯರಿಗೆ ಘಟಕದ ಮಾಹಿತಿಯನ್ನು ತಿಳಿಸಿದರು. ಇಚಿಲಂಪಾಡಿ ನೇರ್ಲ ಶಾಲೆಯ ಶಾಲಾ ಮುಖ್ಯಗುರು ಜಯಶ್ರೀ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ನಂದ ಕುಮಾರಿ, ಸದಸ್ಯರು, ಘಟಕದ ಸ್ವಯಂಸೇವಕರು ಉಪಸ್ಥಿತರಿದ್ದರು. ಘಟಕ ಸಂಯೋಜಕಿ ನಮಿತಾ ಶೆಟ್ಟಿ ನಿರೂಪಿಸಿ, ಸ್ವಾಗತಿಸಿದರು. ಇಚಿಲಂಪಾಡಿ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ವೇದಾ ಪಿ.ವಂದಿಸಿದರು.