

ಕಾಸರಗೋಡು: ಜಿಲ್ಲಾ ನ್ಯಾಯಾಲಯದಲ್ಲಿ ಕಳವಿಗೆ ಯತ್ನಿಸಿದ ಪ್ರಕರಣದ ಆರೋಪಿ ಕೋಯಿಕ್ಕೋಡ್ ತೊಟಿಲ್ಪಾಲಂ ನಿವಾಸಿ ಸನೀಷ್ ಜಾರ್ಜ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಪಿ.ಬಿಜೋಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಪ್ರಕರಣದ ತನಿಖೆಗಾಗಿ ಕಾಸರಗೋಡು ಡಿವೈಎಸ್ಪಿ ಹಾಗೂ ವಿದ್ಯಾನಗರ ಎಸ್ಎಚ್ಒ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ವೈಜ್ಞಾನಿಕ ತನಿಖೆ ನಡೆಸಿ ಆರೋಪಿಯನ್ನು ಅಂಗಮಾಲಿಯಿಂದ ಬಂಧಿಸಲಾಗಿದೆ. ದರೋಡೆ ಯತ್ನ ನಡೆದ ದಿನ ಆರೋಪಿ ವಿದ್ಯಾನಗರ ನಾಯನ್ಮಾರ್ಮೂಲೆಯ ಹೈಯರ್ ಸೆಕೆಂಡರಿ ಶಾಲೆ ಹಾಗೂ ಚೆಂಗಳದ ಮರದ ಕಾರ್ಖಾನೆಯಿಂದ ನಗದು ಕಳವು ಪ್ರಕರಣದಲ್ಲೂ ಶಾಮೀಲಾಗಿದ್ದಾನೆ.