

ಮಂಗಳೂರು : ಪುತ್ತೂರು ವಿಭಾಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಐಟಿಐ ಹಾಗೂ ಎಸ್ಎಸ್ಎಲ್ಸಿ ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಐಟಿಐ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಬಾಕಿ ಇರುವ ಖಾಲಿ ಸ್ಥಾನಗಳ ವಿವರ :
ಮೆಕಾನಿಕಲ್ ಡಿಸೇಲ್ - 25 , ಇಲೆಕ್ಟ್ರಾನಿಕ್ಸ್ ಮೆಕಾನಿಕ್ - 10, ಇಲೆಕ್ಟ್ರಿಷಿಯನ್ - 10, ಮೋಟಾರ್ ಮೆಕ್ಯಾನಿಕ್ ವೆಹಿಕಲ್ - 5, ವೆಲ್ಡರ್ - 5, ಫಿಟ್ಟರ್ - 10, ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್ - 4 , ಮೆಕಾನಿಕ್ ಆಟೋಮೊಬೈಲ್ - 23 ಹಾಗೂ ಪಾಸಾ - 13 ಸ್ಥಾನಗಳು ಲಭ್ಯವಿದೆ .ತರಬೇತಿ ಅವಧಿ 1 ವರ್ಷ.
ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ನಿಯೋಜನೆಗೆ ಮೆಕಾನಿಕ್ ಡೀಸೆಲ್ ನಲ್ಲಿ 30 ಸ್ಥಾನಗಳು ಲಭ್ಯವಿದ್ದು, ತರಬೇತಿ ಅವಧಿ 2 ವರ್ಷಗಳಾಗಿದೆ.
ರ್ಹ ಅಭ್ಯರ್ಥಿಗಳು ಆ.25 ರೊಳಗೆ ವಿಭಾಗಿಯ ಕಚೇರಿ , ಕೆಎಸ್ಆರ್ಟಿಸಿ ನಿಗಮ, ಮುಕ್ರಂಪಾಡಿ, ದರ್ಬೆ, ಪುತ್ತೂರು ಇಲ್ಲಿಗೆ ಅರ್ಜಿ ಸಲ್ಲಿಸಬೇಕು. ಆ. 30 ರಂದು ಬೆಳಗ್ಗೆ 10ಕ್ಕೆ ಮೂಲ ದಾಖಲಾತಿಗಳೊಂದಿಗೆ ಶಿಶಿಕ್ಷು ಆಯ್ಕೆ ಸಮಿತಿಯ ಮುಂದೆ ನೇರ ಸಂದರ್ಶನಕ್ಕೆ ಹಾಜರಾಗುವಂತೆ ಕ.ರಾ.ರ.ಸಾ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.