ಜಿಲ್ಲೆ

ವಿವಿಧ ಕಳವು ಪ್ರಕರಣಗಳಲ್ಲಿ 30 ಲಕ್ಷ ರೂಪಾಯಿಗೂ ಅಧಿಕ ನಗ,ನಗದು, ವಾಹನ ವಶ

chandru

ಚಿತ್ರದುರ್ಗ: ಜಿಲ್ಲೆಯ ಪೊಲೀಸರು ವಿವಿಧ ಠಾಣೆಗಳ ವ್ಯಾಪ್ತಿ‌ ನಡೆದ ಕಳವು ಹಾಗೂ ಎಟಿಎಂ ಪ್ರಕರಣಗಳನ್ನು ಭೇದಿಸಿ ಅಂದಾಜು 30 ಲಕ್ಷ ರೂಪಾಯಿಗೂ ಅಧಿಕ ನಗ, ನಗದು, ಬೈಕ್ ಗಳು ಹಾಗೂ ಒಂದು ಕಾರನ್ನು ವಶಪಡಿಸಿಕೊಂಡು ಐವರು ಅರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ‌ ನೀಡಿದ ಎಸ್ಪಿ.ಜಿ.ರಾಧಿಕಾ, ಬಂಧಿತರ ಪೈಕಿ ಅನಂತಪುರ ಜಿಲ್ಲೆಯವರೂ ಇದ್ದಾರೆ. ಚಿತ್ರದುರ್ಗ ಕೋಟೆ ಠಾಣೆ ವ್ಯಾಪ್ತಿಯಲ್ಲಾದ ನಾಲ್ಕು ಲಕ್ಷ ರೂಪಾಯಿ ನಗದು ಎಟಿಎಂ‌ ವಂಚನೆ ಸಹಿತ ಮನೆ ಕಳ್ಳತನ, ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನೂ ಸೆರೆಹಿಡಿಯಲಾಗಿದೆ ಎಂದು ಹೇಳಿದರು.

ಚಿತ್ರದುರ್ಗದಲ್ಲಿ ಗಾಂಜಾ ಬೆಳೆ ಹಾಗೂ ಅದರ ಪುಡಿ ಮಾರಾಟ ಹೊರತು ಪಡಿಸಿ ಉಳಿದ ಮಾದಕ ವಸ್ತುಗಳ ಮಾರಾಟ ಕೃತ್ಯ ಕಳೆದ ಆರು ವರ್ಷಗಳಲ್ಲಿ ನಡೆದಿಲ್ಲ ಎಂದರು. ಎಎಸ್ಪಿ ಎಂ.ಬಿ.ನಂದಗಾವಿ ಮತ್ತಿರರ ಪೊಲೀಸ್ ಅಧಿಕಾರಿಗಳಿದ್ದರು.