ಅಡಪಾಡಿ ಕ್ಷೇತ್ರದಲ್ಲಿ ಚಂಡಿಕಾಯಾಗ ನಡೆಯಿತು. 40ಕ್ಕೂ ಅಧಿಕ ವೈದಿಕರು ಉಪಸ್ಥಿತರಿದ್ದರು. 
ಜಿಲ್ಲೆ

ಅಡಪಾಡಿ ಕ್ಷೇತ್ರದಲ್ಲಿ ಚಂಡಿಕಾಯಾಗ

ಇಂದಿರಾ ಎನ್ ಕೆ

ಕಾರ್ಕಳ: ಕಾರಣಿಕ ಕ್ಷೇತ್ರ ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ, ಶ್ರೀ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಗುರುವಾರ ನಡೆದ ಚಂಡಿಕಾಯಾಗದಲ್ಲಿ ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್ ದಂಪತಿ ಸಹಿತ ಅನೇಕ ಭಕ್ತರು ಭಾಗವಹಿಸಿದರು. ಧರ್ಮದರ್ಶಿ ಪುಂಡಲೀಕ ನಾಯಕ್, ತಂತ್ರಿಗಳಾದ ದಯಾನಂದ ಭಟ್ ಕಲ್ಲಡ್ಕ, ರಮೇಶ್ ಭಟ್ ಪೆರ್ಣಂಕಿಲ, ಹರಿಪ್ರಸಾದ್ ಭಟ್, ವಿಷ್ಣುಪ್ರಸಾದ್ ಭಟ್, ಶಿವಪ್ರಸಾದ್ ಭಟ್ ಸಹಿತ 40ಕ್ಕೂ ಅಧಿಕ ವೈದಿಕರು ಕಾರ್ಯಕ್ರಮದಲ್ಲಿದ್ದರು.