ಜಿಲ್ಲೆ

Chammundi Hills: ಚಾಮುಂಡಿ ಬೆಟ್ಟದಲ್ಲಿ ಕಾಡ್ಗಿಚ್ಚು; ಬೆಂಕಿಗೆ ಕಿಡಿಗೇಡಿಗಳ ಕೃತ್ಯ ಶಂಕೆ

ಮೋಹನ್​ ಶೆಟ್ಟಿ

Chammundi Hills: ಮೈಸೂರಿನ ನಾಡದೇವತೆ, ಅಧಿದೇವತೆ ತಾಯಿ ಚಾಮುಂಡಿ ನೆಲೆಸಿರುವ ಬೆಟ್ಟದಲ್ಲಿ ಇಂಡು ದಿಢೀರ್​ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಯ ಕೆನ್ನಾಲಿಗೆಗೆ ಬೆಟ್ಟದ ಹಲವು ಭಾಗ ಸುಟ್ಟುಹೋಗಿವೆ.

ಇಂದು (ಫೆ.21) ಮಧ್ಯಾಹ್ನ ಅಗ್ನಿ ಕಾಣಿಸಿಕೊಂಡಿದ್ದು, ಬಹಳ ವೇಗವಾಗಿ ನೂರಾರು ಎಕರೆಗೆ ಹಬ್ಬಿದೆ. ತಕ್ಷಣವೇ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಬೇಸಿಗೆ ಆರಂಭವಾದ ಹಿನ್ನೆಲೆ ಅರಣ್ಯ ಪ್ರದೇಶವು ಒಣಗಿತ್ತು. ದಿಢೀರ್ ಬೆಂಕಿ ತಗುಲಲು ಮಾನವ ಕೃತ್ಯವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಬೀಡಿ ಅಥವಾ ಸಿಗರೇಟು ಹಚ್ಚಿ, ಅದನ್ನು ಆರಿಸದೆ ಎಸೆದುಹೋದ ಕಾರಣ ಬೆಂಕಿ ಹತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ.