ಶ್ರೀ ನಿರುಪಾದೀಶ್ವರ ಪುರಾಣ ಮಂಗಲ

background (2)
Published on

ಕುಕನೂರು: ತಾಲೂಕಿನ ಭಾನಾಪುರ ಗ್ರಾಮದಲ್ಲಿ ಶ್ರೀ ನಿರುಪಾದೀಶ್ವರ ಮಠದಲ್ಲಿ ಕಳೆದ ಶಿರಹಟ್ಟಿ ಫಕೀರಸ್ವಾಮಿ ಮಹಾಪುರಾಣ ನಿಮಿತ್ತ ಫಕೀರಸ್ವಾಮಿ ಭಾವಚಿತ್ರ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆಯೇ ಶ್ರೀ ನಿರುಪಾದೀಶ್ವರ ಮಠದಲ್ಲಿ ಪುರಾಣ ಮಂಗಲ ಹಿನ್ನೆಲೆಯಲ್ಲಿ ವಿವಿಧ ಪೂಜೆ ನಡೆದವು. ನಂತರ ನೂರಾರು ಭಕ್ತರು ಮಹಾದಾಸೋಹದಲ್ಲಿ ಪ್ರಸಾದ ಸೇವಿಸಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಮಹಿಳೆಯರು ಕುಂಭದೊಂದಿಗೆ ಸಾಗಿದರು. ಕವಿ ಗವಾಯಿ ಕಲ್ಲಿನಾಥ ಶಾಸ್ತ್ರಿ ಅವರು ಪುರಾಣ ಪ್ರವಚನ ನಡೆಸಿಕೊಟ್ಟರು. ಆಕಾಶವಾಣಿ ಕಲಾವಿದ ಈಶ್ವರಯ್ಯ ಹಲಸಿನಮಠ, ಖಾದರಸಾಬ್ ಸಿದ್ನೆಕೊಪ್ಪ, ದೇವಪ್ಪ ಹಣವಾಳ ಸಂಗೀತ ಸೇವೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net