ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಕೋವಿಡ್ ಸೋಂಕಿತರು ಸಾವಿಗೀಡಾದ ಪ್ರಕರಣವನ್ನು ರಾಜ್ಯ ಸರ್ಕಾರ ಬುಧವಾರ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ನಿವೃತ್ತ ನ್ಯಾಯಮೂರ್ತಿ ಬಿ. ಎಂ. ಪಾಟೀಲ್ ನೇತೃತ್ವದಲ್ಲಿ ತನಿಖೆ ನಡೆಯಲಿದ್ದು, ಒಂದು ತಿಂಗಳಲ್ಲಿ ತನಿಖಾ ವರದಿ ನೀಡಲು ಸೂಚಿಸಲಾಗಿದೆ. ಏಕಸದಸ್ಯ ತನಿಖಾ ಆಯೋಗವು ಮೈಸೂರಿನಿಂದ ಕಾರ್ಯನಿರ್ವಹಿಸಲಿದೆ.

ದಾಖಲೆಗಳನ್ನು ಕೂಡಲೇ ಸೀಜ್ ಮಾಡಲು ಆದೇಶ
ಆಕ್ಸಿಜನ್ ಸಾಗಾಟಕ್ಕೆ ಸಂಬಂಧಿಸಿದ ಚಾಮರಾಜನಗರ ಆಸ್ಪತ್ರೆ ದಾಖಲೆ, ಚಾಮರಾಜನಗರ ಹಾಗೂ ಮೈಸೂರು ಡಿಸಿ ಕಚೇರಿಗಳ ದಾಖಲೆಗಳನ್ನು ಕೂಡಲೇ ಸೀಜ್ ಮಾಡಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶ ನೀಡಿದೆ.
ಇದಕ್ಕೂ ಮುನ್ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಅವರಿಂದ ಹೈಕೋರ್ಟ್‌ಗೆ ಮಾಹಿತಿ ನೀಡಲಾಗಿತ್ತು. ನ್ಯಾಯಾಂಗ ತನಿಖೆ ಕುರಿತು ನಿಲುವು ತಿಳಿಸಲಷ್ಟೇ ನಾವು ಹೇಳಿದ್ದೆವು. ನಿವೃತ್ತ ನ್ಯಾಯಮೂರ್ತಿಗಳನ್ನು ಸರ್ಕಾರ ನೇಮಕ ಮಾಡುವುದಲ್ಲ. ಆ ನಿರ್ಧಾರವನ್ನು ಹೈಕೋರ್ಟ್‌ಗೆ ಬಿಡಿ ಎಂದಿ ಸಿಜೆ ಹೇಳಿದ್ದರು.