ಬೆಂಗಳೂರು ಗ್ರಾಮಾಂತರ: ದೇವಸ್ಥಾನ ತೆರೆಯುವಂತಿಲ್ಲ, ದೇವಳಗಳಲ್ಲಿ ಯಾವುದೇ ಪೂಜೆ ಪುನಸ್ಕಾರ ನೆರವೇರಿಸುವಂತಿಲ್ಲ ಎಂಬುದು ಸರ್ಕಾರ ಕಟ್ಟಪ್ಪಣೆಯಾಗಿದೆ. ಆದರೆ ದೇವಸ್ಥಾನವನ್ನು ಮುಚ್ಚಿ ಆವರಣದ ಹೊರಗಿನ ಗೇಟ್ಗೆ ಪೂಜೆ ನೆರವೇರಿಸಿದರೂ ಅಂಥವರ ವಿರುದ್ಧ ಕೇಸ್ ಬೀಳುತ್ತೆ ಎಚ್ಚರ..!!!
ದೇವನಹಳ್ಳಿ ತಾಲೂಕು ಬೆಸ್ತರ ಪೇಟೆಯಲ್ಲಿ ದೇಗುಲದ ಬಾಗಿಲು ಮುಚ್ಚಿ ಅಲ್ಲಿನ ಗೇಟ್ಗೆ ಪೂಜೆ ಮಾಡುತ್ತಿದ್ದ ದೇಗುಲದ ಅರ್ಚಕ ಗಂಗಾಧರ್ ಸೇರಿ 25 ಮಂದಿ ವಿರುದ್ಧ ಜಿಲ್ಲಾಡಳಿತ ಪ್ರಕರಣ ದಾಖಲಿಸಿ ಪೂಜಾ ಕಾರ್ಯಕ್ಕೆ ತಡೆಯೊಡ್ಡಿದೆ. ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಸಿಬ್ಬಂದಿ ಸಹಾಯದಿಂದ ಜನರ ಪೂಜಾ ಕಾರ್ಯ ತೆರವುಗೊಳಿಸಲಾಗಿದೆ. ಈ ವೇಳೆ ಭಕ್ತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ಪೊಲೀಸರನ್ನು ಸ್ಥಳದಲ್ಲೇ ಇರಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದ್ದಾರೆ.