ಹೊಸಪೇಟೆ: ಸುಳ್ಳು ದಾಖಲೆ ಸೃಷ್ಟಿಸಿ 40 ಲಕ್ಷ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾಗಿದ್ದ ಸಬ್ ರಿಜಿಸ್ಟಾರ್ ಸೇರಿ ಐವರ ವಿರುದ್ಧ ಕೇಸ್ ದಾಖಲಾಗಿದೆ.
ಹೊಸಪೇಟೆಯ ಉಪನೋಂದಣಾಧಿಕಾರಿ ತಿಪ್ಪೇಸ್ವಾಮಿ, ಸ್ಟಾಂಪ್ ರೈಟರ್ ಶಾಂತಿನಾಥ ರಾವ್ ಸಿಂಧೆ ಹಾಗೂ ನಜೀರ್ ಅಹಮದ್, ಶಂಷಾದ್ ಬೇಗಂ ಮತ್ತು ನಗರಸಭೆ ಸಿಬ್ಬಂದಿ ಸೇರಿ ಐವರ ವಿರುದ್ಧ ಪಾಯಲ್ ಜೈನ್ ಎಂಬಾತ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳು ಶಂಷಾದ್ ಬೇಗಂ ಎಂಬ ಹೆಸರು ಸೃಷ್ಟಿಸಿ, ಆ ಹೆಸರಿನ ಮೇಲೆ ಡೋರ್ ನಂಬರ್ 99 ಮತ್ತು ಅಸೆಸ್ಮೆಂಟ್ 119ರ 16x65 ಅಡಿ ಸುತ್ತಳತೆ ಕಟ್ಟಡವನ್ನು ನಲವತ್ತು ಲಕ್ಷ ರೂ.ಗೆ ಮಾರಾಟಕ್ಕೆ ಇಟ್ಟಿದ್ದರು.
ಆ ಕಟ್ಟಡವನ್ನು ಪಾಯಲ್ ಜೈನ್ ಎಂಬುವರು ಖರೀದಿಸಿದ್ದರು. 2 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಪಡೆದಿದ್ದ ಆರೋಪಿಗಳು ಕಟ್ಟಡ ನೋಂದಣಿ ಬಳಿಕ ಪಾಯಲ್ಜೈನ್ರಿಂದ 38 ಲಕ್ಷ ಹಣವನ್ನ ಚೆಕ್ ಮೂಲಕ ಪಡೆದಿದ್ದರು. ನೋಂದಣಿ ನಂತರ ನಗರಸಭೆಯಲ್ಲಿ ಮುಟೇಷನ್ ಮಾಡಿಸಲು ಹೋದಾಗ ಅಸಲಿ ಸತ್ಯ ಬಯಲಾಗಿದೆ.