ಜಿಲ್ಲೆ

ಒತ್ತಡ ನಿರ್ವಹಣೆಯಿಂದ ವೃತ್ತಿ ಜೀವನದಲ್ಲಿ ಯಶ: ಡಾ.ಹರಿದಾಸ್​ ನಾಯರ್​ ಸಲಹೆ

Avinash R

ಬೆಳ್ತಂಗಡಿ: ಮಾನಸಿಕ ಒತ್ತಡ ನಿವಾರಿಸುವಲ್ಲಿ ಯೋಗ, ಧ್ಯಾನ ಹಾಗೂ ದೈಹಿಕ ವ್ಯಾಯಾಮ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು, ಒಳ್ಳೆಯ ಸ್ನೇಹಿತರೊಂದಿಗೆ ಸಂಪರ್ಕ ಮತ್ತು ಸಮಸ್ಯೆ ಎದುರಾದಾಗ ಹಿರಿಯರೊಂದಿಗೆ ಚರ್ಚಿಸಿ ಮಾರ್ಗದರ್ಶನ ಪಡೆಯುವುದು ಅಗತ್ಯವಾಗಿರುತ್ತದೆ. ಈ ಮುಖಾಂತರ ಒತ್ತಡವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದಲ್ಲಿ, ವಿದ್ಯಾರ್ಥಿಗಳು ಶೈಕ್ಷಣಿಕ ಹಾಗೂ ವೃತ್ತೀಜಿವನದಲ್ಲಿ ಅಭಿವೃದ್ಧಿ ಕಂಡುಕೊಳ್ಳಬಹುದು ಎಂದು ಯು.ಎ.ಇ.ಯ ಒಎಚ್​ಎಸ್​ಎಸ್​ಎಐ ಫೌಂಡೇಷನ್​ ಅಧ್ಯಕ್ಷ ಡಾ.ಹರಿದಾಸ್​ ನಾಯರ್​ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್​ ಕಾಲೇಜಿನಲ್ಲಿ ವಿದ್ಯಾರ್ಥಿ ಹಾಗೂ ಅಧ್ಯಾಪಕ ವೃಂದದೊಂದಿಗೆ ಸಂವಾದದಲ್ಲಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್​ಕುಮಾರ್​, ಶ್ರೀ ಶರದ್​ವಿಹಾರಿದಾಸ್​, ಆಧ್ಯಾತ್ಮಿಕ ಮಾರ್ಗದರ್ಶಕ, ಭಕ್ತಿವೇದಾಂತ ಅಕಾಡೆಮಿ ಮಂಗಳೂರು ಮತ್ತು ಸಿವಿಲ್​ ವಿಭಾಗ ಮುಖ್ಯಸ್ಥರಾದ ಡಾ.ರವೀಶ್​ಪಡುಮಲೆ ಉಪಸ್ಥಿತರಿದ್ದರು.