ಅಂಕತಡ್ಕ ಶ್ರೀ ಗುರುದೇವ ಸೇವಾಬಳಗ

20 Ganesha
Published on

ಕಡಬ: ಪಾಲ್ತಾಡಿ ಗ್ರಾಮದ ಅಂಕತಡ್ಕದಲ್ಲಿ ಶ್ರೀ ಗುರುದೇವ ಸೇವಾಬಳಗ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಗಣೇಶೋತ್ಸವ ಜರುಗಿತು.

ಬೆಳಗ್ಗೆ ಗಣಪತಿ ವಿಗ್ರಹದ ಪ್ರತಿಷ್ಠಾಪನೆ, ಭಜನಾ ಕಾರ್ಯಕ್ರಮ, ಬಳಿಕ ಸಾಧಕರಿಗೆ ಸನ್ಮಾನ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಹಿರಿಯ ಅರ್ಚಕ ಪರಮೇಶ್ವರ ಮನೋಳಿತ್ತಾಯ, ಹಿರಿಯ ವೈದ್ಯ ಡಾ.ರಾಮಚಂದ್ರ ಭಟ್ ಎ.ಪಿ, ನಿವೃತ್ತ ಸೇನಾಧಿಕಾರಿ ಸಂಜೀವ ಗೌಡ ಪಾಲ್ತಾಡಿ, ನಿವೃತ್ತ ಶಿಕ್ಷಕ ಬಾಬು ಎನ್, ನಾಟಿ ವೈದ್ಯ ಕಂಪ ರಾಮಣ್ಣ ಪೂಜಾರಿ, ಪದವಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ನಿಶ್ಮಿತಾ ಎ, ಶೇಷಪ್ಪ ಮಡಿವಾಳ ಚೆನ್ನಾವರ, ನಿವೃತ್ತ ಶಿಕ್ಷಕ ಮೋನಪ್ಪ ಗೌಡ ಅಂಕತಡ್ಕ, ಬಿಎಸ್‌ಎನ್‌ಎಲ್ ನಿವೃತ್ತ ನೌಕರ ಪುಟ್ಟಣ್ಣ ಸಿ.ಎಂ.ಅಂಕತಡ್ಕ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಂಸದ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಸಮಿತಿ ಅಧ್ಯಕ್ಷ ರೋಶನ್ ಬಂಗೇರ ಬಾಲಾಯ, ಕಾರ್ಯದರ್ಶಿ ಸುಕೇಶ್ ರೈ, ಸವಣೂರು ಗ್ರಾ.ಪಂ ಸದಸ್ಯ ಸತೀಶ್ ಅಂಗಡಿಮೂಲೆ, ಸಮಿತಿ ಪದಾಧಿಕಾರಿಗಳಾದ ಸುಬ್ರಾಯ ಗೌಡ ಪಾಲ್ತಾಡಿ, ತ್ಯಾಂಪಣ್ಣ ರೈ, ರಾಮಣ್ಣ ರೈ, ಕಂಪ ತಾರಾನಾಥ, ಹರೀಶ್ ಮಡಿವಾಳ, ಪುಟ್ಟಣ್ಣ ಗೌಡ, ಗುಡ್ಡಪ್ಪ ರೈ ಕೋರಿಕ್ಕಾರು, ರೋಹಿತ್ ರೈ ಮೊದಲಾದವರಿದ್ದರು. ಸಂಜೆ ಬಂಬಿಲ ಗೌರಿಹೊಳೆಯಲ್ಲಿ ಗಣಪತಿ ವಿಗ್ರಹದ ಜಲಸ್ಥಂಭನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net