ಜಿಲ್ಲೆ

ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಯಿತು ಸಚಿವರ ಕಾರು; ನಂತರ ಏನಾಯ್ತು ನೋಡಿ!

ಬೆಂಗಳೂರು: ಸಚಿವರು-ಶಾಸಕರ ಕಾರುಗಳ ಅಪಘಾತಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಗೊಂಡಿದ್ದು, ಸಚಿವ ಗೋವಿಂದ ಕಾರಜೋಳರ ಕಾರು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದೆ. ನೆಲಮಂಗಲದ ಕುಲುವನಹಳ್ಳಿ ಬಳಿ ಈ ಅಪಘಾತ ಸಂಭವಿಸಿದೆ.

ನೆಲಮಂಗಲ ತಾಲ್ಲೂಕು ತಾಳೆಕೆರೆ ಮೂಲದ ಕೃಷ್ಣಮೂರ್ತಿ (45) ಅಪಘಾತದಲ್ಲಿ ಗಾಯಗೊಂಡ ದ್ವಿಚಕ್ರ ವಾಹನ ಸವಾರ. ಸಚಿವರ ಗೋವಿಂದ ಕಾರಜೋಳ ಅವರು ತುಮಕೂರಿನಿಂದ ಬೆಂಗಳೂರಿಗೆ ತಮ್ಮ ಕೆಎ 63 ಜಿ 7777 ನಂಬರಿನ ಇನ್ನೋವಾ ಕಾರಿನಲ್ಲಿ ಆಗಮಿಸುತ್ತಿದ್ದರು.

ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಕೃಷ್ಣಮೂರ್ತಿ ನೆಲಮಂಗಲದ ಕುಲುವನಹಳ್ಳಿ ಬಳಿ ಸಚಿವರ ಕಾರಿಗೆ ಅಡ್ಡ ಬಂದಿದ್ದು, ಕಾರು ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಕೃಷ್ಣಮೂರ್ತಿ ಕಾಲು ಮುರಿತಕ್ಕೆ ಒಳಗಾಗಿದೆ. ತಕ್ಷಣ ಅವರನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟ ಸಚಿವರು ಬಳಿಕ ತಾವೂ ಆಸ್ಪತ್ರೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಚಿಕಿತ್ಸೆಯ ಸಂಪೂರ್ಣ ಜವಬ್ದಾರಿ ನೋಡಿಕೊಳ್ಳುವಂತೆ ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್‌ಗೆ ಸಚಿವರು ಸೂಚನೆ ನೀಡಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.