ಅಪಘಾತದ ಬಳಿಕ ಮತ್ತೆ ಮೊದಲಿನಂತೆ ನಿಲ್ಲಿಸಲಾದ ಬಸ್, ಸ್ಥಳದಲ್ಲಿ ಜಮಾಯಿಸಿದ್ದ ಜನರು.. 
ಜಿಲ್ಲೆ

ನಿಶ್ಚಿತಾರ್ಥಕ್ಕೆ ಹೋಗಿದ್ದವರಿದ್ದ ಬಸ್​ ಪಲ್ಟಿ; ಇಬ್ಬರು ಸ್ಥಳದಲ್ಲೇ ಸಾವು, ಇನ್ನಿಬ್ಬರ ಸ್ಥಿತಿ ಗಂಭೀರ, ಹತ್ತಕ್ಕೂ ಅಧಿಕ ಮಂದಿಗೆ ಗಾಯ..

ಬಾಗಲಕೋಟೆ: ನಿಶ್ಚಿತಾರ್ಥ ಸಮಾರಂಭ ಮುಗಿಸಿಕೊಂಡು ಮರಳುತ್ತಿದ್ದವರು ಇದ್ದ ಮಿನಿ ಬಸ್ ಡಿವೈಡರ್​ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದ್ದು, ಹತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೊರವಲಯದಲ್ಲಿ ಈ ಅಪಘಾತ ಸಂಭವಿಸಿದೆ. ಮುಧೋಳ-ವಿಜಯಪುರ ರಸ್ತೆಯಲ್ಲಿನ ವಿಭಜಕಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ಪಲ್ಟಿಯಾಗಿದೆ. ಪರಿಣಾಮವಾಗಿ ಬಸ್​ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತಪಟ್ಟವರು ಬಾದಾಮಿ ತಾಲೂಕಿನ ಮುಷ್ಟಿಗೇರಿ ಗ್ರಾಮದವರು ಎಂದು ತಿಳಿದು ಬಂದಿದೆ. ಬಸ್​ನಲ್ಲಿದ್ದವರು ತೇರದಾಳ ಪಟ್ಟಣಕ್ಕೆ ಎಂಗೇಜ್​ಮೆಂಟ್​ ಕಾರ್ಯಕ್ರಮಕ್ಕೆ ತೆರಳಿದ್ದರು. ಅಲ್ಲಿಂದ ಮರಳುವಾಗ ಈ ಅಪಘಾತ ಸಂಭವಿಸಿದೆ. ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಮುಧೋಳ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದೆ.