ಮೂಡುಬಿದಿರೆ: ನಾಯಕತ್ವಕ್ಕೆ ರೂಪ, ವಂಶ ಪರಂಪರೆ, ಶ್ರೀಮಂತಿಕೆ, ಅತಿ ಬುದ್ಧಿವಂತಿಕೆ ಯಾವುದೂ ಅಗತ್ಯವಿಲ್ಲ. ಆದರೆ ಶ್ರದ್ಧೆ, ಹಠ ಕಾರ್ಯತತ್ಪರತೆ ಬೇಕು. ಆತ್ಮವಿಶ್ವಾಸ ಮುಖ್ಯ. ಶಿಕ್ಷಣದಿಂದ ಆತ್ಮವಿಶ್ವಾಸ ಬರುತ್ತದೆ. ಉತ್ತಮ ನಾಯಕರನ್ನು ಆಯ್ಕೆ ಮಾಡಿದರೆ ಉತ್ತಮ ಜೀವನ ಸಾಗಿಸಲು ಸಾಧ್ಯ ಎಂದು ಶ್ರೀಮಹಾವೀರ ಕಾಲೇಜಿನ ಉಪನ್ಯಾಸಕಿ ಪೂರ್ಣಿಮಾ ಶೆಟ್ಟಿ ಹೇಳಿದರು.
ಮೂಡುಬಿದಿರೆ ಬಾಬು ರಾಜೇಂದ್ರಪ್ರಸಾದ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನೆ, ಇನ್ನರ್‌ವ್ಹೀಲ್ ಕ್ಲಬ್ ಮೂಡುಬಿದಿರೆ ವಿದ್ಯಾರ್ಥಿಗಳಿಗೆ ನೀಡಿದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇನ್ನರವ್ಹೀಲ್ ಕ್ಲಬ್ ನಿಯೋಜಿತ ಅಧ್ಯಕ್ಷೆ ಶ್ವೇತಾ ಜೈನ್ ಪುಸ್ತಕ ವಿತರಿಸಿದರು. ಮಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಮನೋಜ್ ಅವರನ್ನು ಸನ್ಮಾನಿಸಲಾಯಿತು. ಇನ್ನರವ್ಹೀಲ್ ಕ್ಲಬ್ ಕಾರ್ಯದರ್ಶಿ ಅನಿತಾ, ಸದಸ್ಯೆ ವೀಣಾ, ಶಾಲಾ ನಾಯಕ ಪ್ರಣಾಮ್, ಉಪನಾಯಕ ಸುಹಾನ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ತೆರೆಸಾ ಪ್ರತಿಜ್ಞಾವಿಧಿ ಬೋಧಿಸಿದರು. ಸಾನಿಕಾ ಕಾರ್ಯಕ್ರಮ ನಿರೂಪಿಸಿದರು. ಹೈಫಾ ಫತಿಮಾ ವಂದಿಸಿದರು.