ಜಿಲ್ಲೆ

ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಇಂದಿರಾ ಎನ್ ಕೆ

ಸುಳ್ಯ: ಗಾಂಧಿನಗರ ಅರಣ್ಯ ಇಲಾಖೆ ಕಚೇರಿ ಬಳಿಯ ಕ್ವಾಟ್ರಸ್ ಹಿಂಭಾಗ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಮೃತದೇಹ ಪತ್ತೆಯಾಗಿದೆ. ಮೃತವ್ಯಕ್ತಿ ಮೂಲತಃ ಈಶ್ವರಮಂಗಲ ನಿವಾಸಿ ನಾರಾಯಣ (53) ಎಂದು ಗುರುತಿಸಲಾಗಿದೆ. ಸುಳ್ಯ ಭಾಗದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರೆಂದು ತಿಳಿದು ಬಂದಿದೆ. ಅವರಿಗೆ ವಿವಾಹವಾಗಿದ್ದು, ಇಬ್ಬರು ಪುತ್ರಿಯರಿದ್ದು, ಪತ್ನಿ ಜೊತೆ ಜಗಳ ಮಾಡಿ ಮನೆಗೆ ಹೋಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.