

ಪಡುಬಿದ್ರಿ: ಎಲ್ಲ ಲೌಕಿಕ ಪದಾರ್ಥಗಳು ಪರಮಾತ್ಮ ಪೂಜೆಗೆ ಪೂರಕ. ಪರಮಾತ್ಮ ಬೇಡವೆಂದು ಲೌಕಿಕ ವಸ್ತುಗಳೇ ಬೇಕೆನ್ನುವ ವ್ಯಾಮೋಹದಿಂದ ನಮಗೆ ದೇವರು ಸಿಗುವುದಿಲ್ಲ, ಜನ್ಮವೂ ಸಾರ್ಥಕವಾಗುವುದಿಲ್ಲ ಎಂದು ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು.
ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುರಾಣ ಸಂದೇಶ ಜ್ಞಾನ ಸತ್ರ ಕುಂಭ ಮಾಘ ಮೇಳ ಶನಿವಾರ ಉದ್ಘಾಟಿಸಿ ಆಶೀರ್ವಚನ ನೀಡಿದರು. ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕ ಎನ್.ಜನಾರ್ದನ ಭಟ್ ಪುರಾಣ ಪ್ರಸ್ತುತಿ ಪಡಿಸಿದರು. ಜನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ ಜನಪದ ಪುರಾಣ ಸಂದೇಶ ನೀಡಿದರು. ಶೀರೂರು ಮಠದ ದಿವಾನ ಉದಯಕುಮಾರ್ ಸರಳತ್ತಾಯ, ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಎನ್.ಮಧ್ವರಾಯ ಭಟ್, ಲಕ್ಷ್ಮಣ ಎಲ್.ಶೆಟ್ಟಿವಾಲ್ ಅರಂತಡೆ ಉಪಸ್ಥಿತರಿದ್ದರು. ವಿದ್ವಾಂಸ ಅಡ್ವೆ ಲಕ್ಷ್ಮೀಶ ಆಚಾರ್ಯ ಸ್ವಾಗತಿಸಿ, ಪ್ರೇರಕ ಎಸ್.ನಾಗರಾಜ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಯಾವತ್ತೂ ಪರಮಾತ್ಮನನ್ನು ಚಿಂತನೆ ಮಾಡುತ್ತಾ ಪರಮಾತ್ಮ ಹೇಳಿದ ರೀತಿಯಲ್ಲಿ ನಾವು ಬದುಕಬೇಕು. ನಾವು ಮಾಡಿದ ಕ್ರಿಯೆಗಳನ್ನು ಕೃಷ್ಣಾರ್ಪಣವೆಂದು ಪರಮಾತ್ಮನಿಗೆ ಅರ್ಪಿಸಿದಲ್ಲಿ ಮಾಡಿದ ಕ್ರಿಯೆ ಸಾರ್ಥಕವಾಗುತ್ತದೆ. ಸಜ್ಜನರ ಸಹವಾಸದಿಂದ ಪ್ರತಿಕ್ಷಣ ಪರಮಾತ್ಮನ ಚಿಂತನೆಯಿರಲು ಸಾಧ್ಯ. ನಾವು ತಪಸ್ಸು ಮಾಡಬೇಕು, ತಪಸ್ಸು ಮಾಡುವವರ ಜತೆಗೂ ಇರಬೇಕು. ಈಗಿದ್ದಾಗ ಮಾತ್ರ ಪರಮಾತ್ರ ಅನುಗ್ರಹವಾಗಲು ಸಾಧ್ಯ. -ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಶೀರೂರು ಮಠ https://www.vijayavani.net/the-meaning-of-life-in-debt-free-living https://www.vijayavani.net/religious-activities-begin-in-mandikeri