ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಹಕಾರಿಯಾಗುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಇಂದಿನಿಂದ ಹೊಸ ಮಾರ್ಗದಲ್ಲಿ ಫೀಡರ್ ಬಸ್ ಸೌಲಭ್ಯ ಆರಂಭಿಸಿದೆ.
ಎಂಫ್-1ಜಿ ಸಂಖ್ಯೆಯ ಬಸ್ ಐಟಿಪಿಎಲ್ ಮೆಟ್ರೋ ನಿಲ್ದಾಣದಿಂದ ಹೋಪ್ ಫಾರಂ, ಚನ್ನಸಂದ್ರ, ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ, ವೈಟ್‌ಫೀಲ್ಡ್, ಪೋಸ್ಟ್ ಆಫೀಸ್, ಹೋಪ್ ಫಾರಂ ಮಾರ್ಗವಾಗಿ ಸಂಚರಿಸಲಿದೆ.
ಎಂಎಫ್-1ಜಿಎ ಬಸ್ ಐಟಿಪಿಎಲ್ ಮೆಟ್ರೋ ನಿಲ್ದಾಣದಿಂದ ಹೋಪ್ ಫಾರಂ, ವೈಟ್‌ಫೀಲ್ಡ್, ಪೋಸ್ಟ್ ಆಫೀಸ್, ಇಮ್ಮಡಿಹಳ್ಳಿ, ನಾಗೊಂಡನಹಳ್ಳಿ, ಚನ್ನಸಂದ್ರ, ಹೋಪ್ ಫಾರಂ ಮಾರ್ಗದಲ್ಲಿ ಸಂಚರಿಸಲಿದೆ.
ಎಂಎಫ್-1ಕೆ ಬಸ್ ಕಾಡುಗೋಡಿ ಮೆಟ್ರೋ ನಿಲ್ದಾಣದಿಂದ ಬೆಳ್ತೂರು, ಸೀಗೆಹಳ್ಳಿ, ಕನ್ನಮಂಗಲ ಗೇಟ್ ತೆರಳಲಿದೆ.
ಎಚ್‌ಎಸ್‌ಆರ್ ಎ್ಡಿಆರ್-1 ಬಸ್ ಅಗರದಿಂದ ಮೆಕ್ ಡೊನಾಲ್ಡ್, ಮಂಗಮ್ಮನಪಾಳ್ಯ, ಪರಂಗಿಪಾಳ್ಯ ಸಂಚರಿಸಲಿದೆ.
ಎಚ್‌ಎಸ್‌ಆರ್ ಎ್ಡಿಆರ್-1ಎ ಬಸ್ ಅಗರ ಬಸ್ ನಿಲುಗಡೆಯಿಂದ ಪರಂಗಿಪಾಳ್ಯ, ಮಂಗಮ್ಮನಪಾಳ್ಯ, ಡೊನಾಲ್ಡ್ ಸಂಚಾರ ನಡೆಸಲಿದೆ.