

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಬೆಳಗ್ಗೆ ತರಕಾರಿಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಏಷ್ಯಾದ ಅತಿದೊಡ್ಡ ತರಕಾರಿ ಸಗಟು ಮಾರುಕಟ್ಟೆಗಳಲ್ಲಿ ಒಂದಾದ ಆಜಾದ್‌ಪುರ ಮಂಡಿಗೆ ಭೇಟಿ ನೀಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮುಂಜಾನೆ 4 ಗಂಟೆಗೆ ಉತ್ತರ ದೆಹಲಿಯ ಆಜಾದ್‌ಪುರ ಮಂಡಿಗೆ ಆಗಮಿಸಿದರು. ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರೊಂದಿಗೆ ಸಂವಾದ ನಡೆಸಿದರು.
ಗಗನಕ್ಕೇರುತ್ತಿರುವ ತರಕಾರಿ ಬೆಲೆ: ಹಲವಾರು ತರಕಾರಿ ತಳಿಗಳು ಪ್ರತಿ ಕಿಲೋಗ್ರಾಂಗೆ 100 ರೂ. ಕ್ಕಿಂತ ಹೆಚ್ಚು ಮಾರಾಟವಾಗುತ್ತಿದೆ. ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ಟೊಮ್ಯಾಟೋ ಕೆಜಿಗೆ 200 ರೂ. ಕ್ಕಿಂತ ಹೆಚ್ಚು ಮಾರಾಟವಾಗುತ್ತಿದೆ.
ಕಳೆದ ತಿಂಗಳು ಹಿಂದೆ ರಾಹುಲ್ ಗಾಂಧಿ ಅವರು ಟ್ರಕ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಅವರು ಮೇ ತಿಂಗಳಲ್ಲಿ ಹರಿಯಾಣದ ಮುರ್ತಾಲ್‌ನಿಂದ ಅಂಬಾಲಾಕ್ಕೆ ಟ್ರಕ್ ಸವಾರಿ ಮಾಡಿದರು. ಬೆಂಗಳೂರಿನಲ್ಲಿ ಡೆಲಿವರಿ ಬಾಯ್ ಜತೆ ಸ್ಕೂಟಿಯಲ್ಲಿ ಸವಾರಿ ಮಾಡಿದ್ದರು. ದೆಹಲಿ ವಿಶ್ವವಿದ್ಯಾಲಯದ ಪಿಜಿ ಪುರುಷರ ಹಾಸ್ಟೆಲ್‌ಗೆ ವಿದ್ಯಾರ್ಥಿಗಳೊಂದಿಗೆ ಊಟಕ್ಕೆ ಭೇಟಿ ನೀಡಿದರು. ನಂತರ UPSC ಆಕಾಂಕ್ಷಿಗಳೊಂದಿಗೆ ಸಂವಹನ ನಡೆಸಲು ದೆಹಲಿಯ ಮುಖರ್ಜಿ ನಗರ ಪ್ರದೇಶಕ್ಕೆ ಭೇಟಿ ನೀಡಿ ಸಂವಾದ ನಡೆಸಿ ಅವರ ಕಷ್ಟಗಳ ಕುರಿತಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.