ಗುರುಪುರ: ಕೃತಕವಾಗಿ ಉತ್ಪಾದಿಸಲಾಗದ ವಸ್ತು ಒಂದಿದ್ದರೆ ಅದು ರಕ್ತ. ರಕ್ತದ ಅವಶ್ಯಕತೆ ಇರುವವರಿಗೆ ದಾನಿಗಳು ಮುಕ್ತ ಮನಸ್ಸಿನಿಂದ ರಕ್ತದಾನ ವಾಡಬೇಕು. ರಕ್ತ ಅನೇಕರ ಜೀವ ಉಳಿಸಬಲ್ಲದು. ರಕ್ತದಾನದ ಕುರಿತು ಜನರಲ್ಲಿರುವ ಭಯ ತೊಲಗಬೇಕು ಎಂದು ಹಿರಿಯ ಕಾರ್ಮಿಕ ಮುಖಂಡ ಸದಾಶಿವ ದಾಸ್ ಹೇಳಿದರು.
ಡಿವೈಎಫ್‌ಐ ಮುಂದಾಳತ್ವದಲ್ಲಿ ವಾಮಂಜೂರು ತಿರುವೈಲು ಜೈಶಂಕರ್ ಮಿತ್ರ ಮಂಡಳಿ ಮತ್ತು ಮಂಗಳೂರು ಆಲ್‌ಕಸ್ವಾ ಫೌಂಡೇಶನ್ ಸಹಯೋಗದಲ್ಲಿ ಕಾರ್ಮಿಕ ಮುಂದಾಳು ದಿ.ಕೆ.ಗಂಗಯ್ಯ ಅಮೀನ್ ಸ್ಮರಣಾರ್ಥ ಜೈಶಂಕರ್ ಮಿತ್ರ ಮಂಡಳಿಯಲ್ಲಿ ಭಾನುವಾರ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ವಾತನಾಡಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ವಾತನಾಡಿ, ಸವಾಜದಲ್ಲಿ ಇಂದು ಆರೋಗ್ಯ ದುಬಾರಿಯಾಗುತ್ತಿದೆ. ಜನರ ಆರೋಗ್ಯದ ಹೆಸರಿನಲ್ಲೂ ಲಾಬಿಗಳು ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ವಲಯದಲ್ಲಿ ವ್ಯಾಪಾರೀಕರಣ ಮಿತಿ ಮೀರುತ್ತಿದೆ. ಈ ಬಗ್ಗೆ ಯಾವುದೇ ಸರ್ಕಾರ ಗಮನಹರಿಸುತ್ತಿಲ್ಲ. ಬಡ ಮಧ್ಯಮ ವರ್ಗದ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಈಗಲೂ ಮರೀಚಿಕೆಯಾಗಿದೆ ಎಂದರು.
ಭಾರತ್ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ನ ವಾಮಂಜೂರು ಸಮಿತಿ ಅಧ್ಯಕ್ಷ ದಿನೇಶ್ ಬೊಂಡಂತಿಲ ಅಧ್ಯಕ್ಷತೆ ವಹಿಸಿದ್ದರು. ಜೈಶಂಕರ್ ಮಿತ್ರ ಮಂಡಳಿ ಗೌರವಾಧ್ಯಕ್ಷ ಲಿಂಗಪ್ಪ ಸಾಲ್ಯಾನ್, ಕಾರ್ಪೋರೇಟರ್ ಹೇಮಲತಾ ಆರ್.ಸಾಲ್ಯಾನ್, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡ ಕೆ.ಕರಿಯ, ಆಲ್‌ಕಸ್ವಾ ಫೌಂಡೇಶನ್ ಅಧ್ಯಕ್ಷ ನಝೀರ್ ಕುದ್ರೋಳಿ, ಸಂತೋಷನಗರ ಮಹಾಕಾಳಿ ಸೇವಾ ಸಮಿತಿ ಸಂಚಾಲಕ ಸಜಿತ್ ಶೆಟ್ಟಿ ಮತ್ತಿತರರಿದ್ದರು.