ಜಿಲ್ಲೆ

ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಬಲಗೈ ಬಂಟನ ಭೀಕರ ಹತ್ಯೆ

ಕಲಬುರಗಿ: ಬಿಜೆಪಿ ಸಂಸದ ಡಾ. ಉಮೇಶ್ ಜಾಧವ್ ಅವರ ಬಲಗೈ ಬಂಟ ಭೀಕರವಾಗಿ ಕೊಲೆಯಾಗಿರುವ ಘಟನೆ ದೇವಲಗಾಣಗಾಪುರ ಠಾಣಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ.

ಗಿರೀಶ್​ ಚಕ್ರ ಕೊಲೆಯಾದ ವ್ಯಕ್ತಿ. ಈತ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ನಿವಾಸಿ. ಸಂಸದ ಜಾಧವ್​ಗೆ ಆತ್ಮೀಯರಾಗಿದ್ದರು. ಇತ್ತೀಚೆಗಷ್ಟೇ ಗಿರೀಶ್​ರನ್ನು ಬಿಎಸ್​ಎಸ್​ಎಲ್ (ತೆರಿಗೆ) ಸಲಹಾ ಸಮಿತಿಗೆ ಜಾಧವ್​ ನೇಮಕ ಮಾಡಿದ್ದರು.

ಸಲಹಾ ಸಮಿತಿಗೆ ನೇಮಕವಾದ ಹಿನ್ನೆಲೆಯಲ್ಲಿ ಪಾರ್ಟಿ ಕೊಡುವುದಾಗಿ ಹೇಳಿ ಜಮೀನಿಗೆ ಕರೆಸಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕೊಲೆಗೂ ಮುನ್ನ ಕಣ್ಣಿಗೆ ಖಾರದಪುಡಿ ಎರಚಲಾಗಿತ್ತು. ಸಾಗನೂರ ಗ್ರಾಮದ ಸಚಿನ್ ಮತ್ತು ಗ್ಯಾಂಗ್​ನಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಗುಂಡು ಹಾರಿಸಿಕೊಂಡು ಯುವಕ ಸಾವು

ಮಡಿಕೇರಿ: ಯುವಕನೊಬ್ಬ ತನ್ನ ಎದೆಗೆ ಗುಂಡು ಹೊಡೆದುಕೊಂಡು ಪ್ರಾಣ ಕಳೆದುಕೊಂಡ ದಾರುಣ ಘಟನೆ ಮಾದಾಪುರ ಸಮೀಪದ ಮುವತ್ತೋಕ್ಲುವಿನಲ್ಲಿ ನಡೆದಿದೆ. ಮೃತನನ್ನು ಪ್ರವೀಣ್ (28) ಎಂದು ಗುರುತಿಸಲಾಗಿದೆ.

ಸಿಂಗಲ್ ಬ್ಯಾರಲ್ ಗನ್​ನಿಂದ ಎದೆಗೆ ಗುಂಡು ಹೊಡೆದುಕೊಂಡು ಪ್ರಾಣ ಬಿಟ್ಟಿದ್ದಾನೆ. ಮೃತದೇಹವನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಾದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇರೆ ಕಡೆ ಉದ್ಯೋಗದಲ್ಲಿರುವ ಪ್ರವೀಣ್‌ ಕೆಲವು ದಿನಗಳ ಹಿಂದೆ ಊರಿಗೆ ಬಂದಿದ್ದ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.