ವಿಜಯವಾಣಿ ಸುದ್ದಿಜಾಲ ಕಾರ್ಕಳ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಇತರ ರಾಜ್ಯಗಳೇ ಮೆಚ್ಚಿಕೊಂಡಿವೆ. ಬೋಳ ಗ್ರಾಪಂ ಸದಸ್ಯರು, ಕಾರ್ಕಳ ಶಾಸಕರ ಹಿಂಬಾಲಕರು ಮಾತ್ರ ಯೋಜನೆಗಳಿಗೆ ಅಡ್ಡಿ ಉಂಟುಮಾಡುತ್ತಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆರೋಪಿಸಿದರು. ಬಿಜೆಪಿ ಮುಖಂಡರ ಅಪಪ್ರಚಾರದ ವಿರುದ್ಧ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಸಮಿತಿ, ಬೋಳ ಗ್ರಾಮೀಣ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಪ್ರಿತ್ ಶೆಟ್ಟಿ ಕೆದಿಂಜೆ, ಗ್ರಾಪಂ ಮಾಜಿ ಸದಸ್ಯ ಅವಿನಾಶ್ ಮಲ್ಲಿ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಭಾನು ಭಾಸ್ಕರ್ ಪೂಜಾರಿ, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಅನಿತಾ ಡಿಸೋಜ, ಪ್ರಮುಖರಾದ ಸುಧಾಕರ ಶೆಟ್ಟಿ, ಕೃಷ್ಣ ಶೆಟ್ಟಿ, ಕಿಶೋರ್, ದೀಕ್ಷಿತ್, ಯೋಗೀಶ್ ಆಚಾರ್ಯ, ಮಂಜುನಾಥ ಜೋಗಿ, ರಾಜೇಂದ್ರ ದೇವಾಡಿಗ, ಸೂರಜ್ ಶೆಟ್ಟಿ ನಕ್ರೆ, ಮಲಿಕ್ ಅತ್ತೂರು, ಬಿ.ಸುದರ್ಶನ್ ಬಂಗೇರ, ಚಂದ್ರಹಾಸ ಪುತ್ರನ್, ರೊನಾಲ್ಡ್ ಅಲ್ಪೊನ್ಸೊ, ಡೆನಿಸ್, ಗಣೇಶ್ ಮೂಲ್ಯ, ಸುರೇಶ್ ಮಸ್ಕರೇನಸ್, ಶಂಕರ ಮೂಲ್ಯ, ಗೀತಾ, ದೀಕ್ಷಿತ್ ಶೆಟ್ಟಿ, ದೀಪಕ್ ಶೆಟ್ಟಿ, ಹೇಮಂತ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸಂತೋಷ್ ದೇವಾಡಿಗ ಸ್ವಾಗತಿಸಿದರು. ಯೋಗೀಶ್ ಮೂಲ್ಯ ವಂದಿಸಿದರು. ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.
ಗ್ಯಾರಂಟಿ ಯೋಜನೆ ತಿರಸ್ಕರಿಸುತ್ತೇವೆ ಎನ್ನುವ ಬಿಜೆಪಿಯನ್ನೇ ಜನ ತಿರಸ್ಕರಿಸಲಿದ್ದಾರೆ. ಮುಂದೆ ಪ್ರತೀ ಪಂಚಾಯಿತಿಗಳಲ್ಲಿ ಅದಾಲತ್ ಆಯೋಜಿಸಿ ಜನಸಾಮಾನ್ಯರಿಗೆ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ದೊರೆಯುವಂತೆ ಮಾಡಲಾಗುವುದು. -ಮಾಳ ಅಜಿತ್ ಹೆಗ್ಡೆ, ಗ್ಯಾರಂಟಿ ಅನುಷ್ಠಾನ ಸವಿತಿ ಅಧ್ಯಕ್ಷ