ಜಿಲ್ಲೆ

ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಸಾಧನೆ

ಇಂದಿರಾ ಎನ್ ಕೆ

ಗಂಗೊಳ್ಳಿ: ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಆಶ್ರಯದಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಯಲ್ಲಿ ಕುಂದಾಪುರದ ನಮಸ್ವಿ ಎಸ್. ಶೆಟ್ಟಿಗಾರ್ ಭರತನಾಟ್ಯ ಕಿರಿಯ ದರ್ಜೆ ಪರೀಕ್ಷೆಯಲ್ಲಿ ಶೇ.92.75 ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಸಾಧನೆಗೈದಿದ್ದಾರೆ. ಶ್ರುತಿ ಭಟ್ ಉದ್ಯಾವರ ಹಾಗೂ ಪ್ರಸ್ತುತ ಆನಂದ್ ಕೇರಳ ಇವರಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಕುಂದಾಪುರ ತಾಲೂಕಿನ ಶ್ರೀಧರ್ ಕುಮಾರ್ ಹಾಗೂ ಲಾವಣ್ಯ ಶ್ರೀಧರ್ ದಂಪತಿ ಪುತ್ರಿ.