ಜಿಲ್ಲೆ

ಧರ್ಮಸ್ಥಳ ಭೂಲೋಕದ ಸ್ವರ್ಗ : ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಬಣ್ಣನೆ

ಸೌಮ್ಯ ಆರ್

ಬೆಳ್ತಂಗಡಿ: ಸರ್ಪಗಳ ಹೆಡೆಯಲ್ಲಿ ವಿಷವಿದ್ದರೆ, ವ್ಯಸನಿಗಳ ದೇಹವೇ ವಿಷಪೂರಿತವಾಗಿರುತ್ತದೆ. ಹಾಗಾಗಿ ಭಾರತ ವಿಶ್ವದಲ್ಲಿ ಮದ್ಯಪಾನ ಸೇವನೆಯಲ್ಲಿ ಪ್ರಥಮ ಸ್ಥಾನ, ಧೂಮಪಾನ ವ್ಯಸನದಲ್ಲಿ ಎರಡನೇ ಸ್ಥಾನ, ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟದಲ್ಲಿ ತೃತೀಯ ಸ್ಥಾನವನ್ನು ಪಡೆದಿದೆ. ಇದರ ಬದಲಾವಣೆ ಮಾಡಲು ಶ್ರೀ ಕ್ಷೇತ್ರ ಹಲವು ಪುಣ್ಯ ಕಾರ್ಯಗಳನ್ನು ಮಾಡುತ್ತಾ ಯಶಸ್ಸನ್ನು ಕಾಣುತ್ತಿದೆ. ಹಾಗಾಗಿ ಧರ್ಮಸ್ಥಳ ಹಲವರ ಬದುಕನ್ನು ಕಟ್ಟಿಕೊಟ್ಟು ಭೂಲೋಕದ ಸ್ವರ್ಗ ಎಂದು ಬೆಳ್ತಂಗಡಿಯ ರಾಜ್ಯ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಸ್ ಹೇಳಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಆಯೋಜಿಸಿರುವ 2025ನೇ ಸಾಲಿನ ಸೆ.14ರಿಂದ 21ರವರೆಗೆ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ 4ನೇ ದಿನದ ಕಾರ್ಯಾಗಾರದಲ್ಲಿ ‘ಆರೋಗ್ಯಕರ ಅಭ್ಯಾಸಗಳು ಜನಜಾಗೃತಿ ಚಲನಚಿತ್ರ ಪ್ರದರ್ಶನ’ ಎಂಬ ವಿಚಾರದ ಕುರಿತು ಉಪನ್ಯಾಸ ನೀಡಿದರು.

ಬದುಕಿನ ಬದಲಾವಣೆಗೆ ಅವಕಾಶ ಮಾಡಿಕೊಡಬಲ್ಲ ಶಕ್ತಿ ಈ ಭಜನಾ ಕಮ್ಮಟಕ್ಕಿದೆ. ಹಾಗಾಗಿ ಈ ಮಹೋತ್ಸವ ಸಭಾಭವನವು ಇಂದು ಅಧಿಕೃತ ಶಾಲೆಯಾಗಿ ಮಾರ್ಪಾಡುಗೊಂಡು ಭಜಕರಿಗೆ ಬದುಕಿನ ಪಾಠವನ್ನು ಕಲಿಸುತ್ತಿದೆ. ಸಂಸ್ಕೃತಿ ಸಂಸ್ಕಾರದ ಬಿತ್ತನೆಗೆ ಇದೊಂದು ಉತ್ತಮ ಬುನಾದಿ ಎಂದರು.