ಜಿಲ್ಲೆ

PHOTOS/VIDEO| ಬೆಂಗಳೂರು ವಿಮಾನ ನಿಲ್ದಾಣ ಪರಿಚಯಿಸಿದೆ 'ಸ್ಪರ್ಶ ರಹಿತ ಪ್ರಯಾಣ' !

ಬೆಂಗಳೂರು: ಪಾರ್ಕಿಂಗ್​ನಿಂದ ಹಿಡಿದು ವಿಮಾನದೊಳಗೆ ಪ್ರವೇಶಿಸುವ ತನಕದ ವ್ಯವಸ್ಥೆಯನ್ನು ಸ್ಪರ್ಶ ರಹಿತವನ್ನಾಗಿ ಮಾಡಿರುವ ಬೆಂಗಳೂರು ಇಂಟರ್​ನ್ಯಾಷನಲ್ ಏರ್​ಪೋರ್ಟ್ ಲಿಮಿಟೆಡ್​ (ಬಿಐಎಎಲ್​), ಇದಕ್ಕೆ 'ಕಾಂಟ್ಯಾಕ್ಟ್​ಲೆಸ್ ಜರ್ನಿ' ಎಂದು ಹೆಸರಿಸಿದೆ. ಈ ಸಂಬಂಧ ವಿಡಿಯೋ ಒಂದನ್ನು ಕೂಡ ಅದು ಬಿಡುಗಡೆ ಮಾಡಿ ಗಮನಸೆಳೆದಿದೆ.

ಇಂದಿನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ಪ್ರಾದೇಶಿಕ ವಿಮಾನ ಯಾನ ಶುರುವಾಗಿದ್ದು, ಪ್ರವೇಶ ಪೂರ್ವ ಪರಿಶೀಲನೆ, ಸುರಕ್ಷಾ ಪರಿಶೀಲೆಯಿಂದ ಹಿಡಿದು ವಿಮಾನ ಪ್ರವೇಶಿಸುವ ತನಕ ಎಲ್ಲವೂ ಸ್ಪರ್ಶ ರಹಿತ ವ್ಯವಸ್ಥೆಯಿಂದ ಕೂಡಿದೆ. ಕರೊನಾ ವೈರಸ್ COVID19 ಕಾರಣಕ್ಕೆ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವಿನ ಸಂವಹನವನ್ನು ಕಡಿಮೆ ಮಾಡಲು ಬಿಐಎಎಲ್ ಈ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಕಾಂಟ್ಯಾಕ್ಟ್​ಲೆಸ್ ಎಂದು ಹೇಳುವಂಥದ್ದು ಕೆಂಪೇಗೌಡ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಬಝ್​ವರ್ಡ್ ಆಗಿರಲಿದೆ ಎಂದು ಬಿಐಎಎಲ್​ ಭಾನುವಾರ ಬಿಡುಗಡೆ ಮಾಡಿದ್ದ ಪ್ರಕಟಣೆಯಲ್ಲಿ ಘೋಷಿಸಿತ್ತು.  ಈ ಟೆಕ್ನಾಲಜಿ ಬಳಕೆಯನ್ನು ಈ ಸಂಕಷ್ಟದ ಅವಧಿಯ ನಂತರವೂ ಮುಂದುವರಿಯಲಿದ್ದು, ಅಡಚಣೆ ಇಲ್ಲದ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲು ತೀರ್ಮಾನಿಸಿರುವುದಾಗಿ ಬಿಐಎಎಲ್​ ಹೇಳಿಕೊಂಡಿದೆ.

ವಿಮಾನ ನಿಲ್ದಾಣದಲ್ಲಿ ಸ್ಪರ್ಶ ರಹಿತ ಸಂವಹನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ನವೀನ ಮಾದರಿಯ ಕಾಂಟ್ಯಾಕ್ಟ್​ಲೆಸ್​ ವ್ಯವಸ್ಥೆಯನ್ನು ಜಾರಿಗೊಳಿಸಿದ್ದೇವೆ. ವಿಮಾನ ನಿಲ್ದಾಣದ ಆವರಣದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಇದು ನಮ್ಮ ಬದ್ಧತೆಯ ಪ್ರತೀಕವಾಗಿದೆ. |ಹರಿ ಮಾರಾರ್​  ಎಂಡಿ, ಸಿಇಒ, ಬಿಐಎಎಲ್​

ಹೊಸ ವ್ಯವಸ್ಥೆಯಲ್ಲಿ ಏನೇನಿದೆ?: ಬಿಐಎಎಲ್ ಮೂಲಗಳ ಪ್ರಕಾರ, ಈ ಹೊಸ ವ್ಯವಸ್ಥೆಯಲ್ಲಿ ಪ್ರವೇಶ ಪೂರ್ವ ಪ್ರಕ್ರಿಯೆ, ಅಲ್ಲಿ ಪ್ರಯಾಣಿಕರು ಮಾಸ್ಕ್​ ಧರಿಸಿರಬೇಕು. ಇ- ಬೋರ್ಡಿಂಗ್ ಪಾಸ್ ಅಥವಾ ಪ್ರಿಂಟೆಂಡ್ ಪಾಸ್ ಹೊಂದಿರಬೇಕು. ಇದಾಗಿ ಅವರು ಥರ್ಮಲ್ ಸ್ಕ್ಯಾನ್​ಗೆ ಒಳಗಾಗಬೇಕು. ಆನಂತರ ಆರೋಗ್ಯ ಸೇತು ಆ್ಯಪ್ ಅನ್ನು ಪ್ರಯಾಣಿಕರು ತಮ್ಮ ಮೊಬೈಲ್​ನಲ್ಲಿ ತೋರಿಸಬೇಕು. ಆ ಆ್ಯಪ್ ನೀವು ಸುರಕ್ಷಿತರು ಎಂಬ ಸಂದೇಶ ತೋರಿಸಿದರಷ್ಟೇ ಪ್ರಯಾಣಕ್ಕೆ ಅನುಮತಿ.

ಈ ತಪಾಸಣಾ ಪ್ರಕ್ರಿಯೆಯನ್ನು ಸಿಐಎಸ್​ಎಫ್​ ಸಿಬ್ಬಂದಿ ನಡೆಸುತ್ತಾರೆ. ಟರ್ಮಿನಲ್ ಎಂಟ್ರನ್ಸ್​ನಲ್ಲಿ ಡೋರ್ಮ್ಯಾಟ್​ಗಳು ಬ್ಲೀಚ್ ಮಾಡಲಾಗಿದ್ದು, ಪಾದರಕ್ಷೆ, ಶೂಗಳನ್ನು ಡಿಸ್​ಇನ್​ಫೆಕ್ಟ್​ ಮಾಡುತ್ತವೆ. ಸೆಲ್ಫ್​ ಸರ್ವೀಸ್​ನ ಕಾಂಟ್ಯಾಕ್ಟ್​ಲೆಸ್​ ಕಿಯೋಸ್ಕ್​ನಲ್ಲಿ ಬ್ಯಾಗೇಜ್​ಗಳನ್ನು ಇರಿಸಬೇಕಾಗಿದ್ದು, ಅದು ಏರ್​ಲೈನ್​ ಕೌಂಟರ್​ಗೆ ಸಾಗುತ್ತದೆ. ಏರ್​ಲೈನ್​ ಬ್ಯಾಗ್ ಡ್ರಾಪ್​ ಕೌಂಟರ್​ಗಳಲ್ಲಿ ಪಾರದರ್ಶಕ ಪಾರ್ಟಿಷನ್​ ಅಳವಡಿಸಲಾಗಿದೆ.

ಇನ್ನು ಹೊಸ ಕಾಂಟ್ಯಾಕ್ಟ್ ಲೆಸ್ ಪ್ರಕ್ರಿಯೆಯಲ್ಲಿ ಬಾಡಿ ಸ್ಕ್ಯಾನಿಂಘ್​ ಅನ್ನು ಡೋರ್​ಫ್ರೇಮ್ ಮೆಟರ್​ ಡಿಟೆಕ್ಟರ್​ಗಳ ಮೂಲಕ ನಡೆಸಲಾಗುತ್ತದೆ. ಬೋರ್ಡಿಂಗ್ ಪಾಸ್ ಮೇಲೆ ಸೀಲ್ ಹಾಕುವುದನ್ನು ಸದ್ಯ ಅಮಾನತು ಮಾಡಲಾಗಿದೆ. ವಿಮಾನಕ್ಕೆ ಪ್ರವೇಶಿಸುವ ಮೊದಲ ಮತ್ತೊಮ್ಮೆ ಪ್ರಯಾಣಿಕರು ಥರ್ಮಲ್ ಸ್ಕ್ರೀನಿಂಗ್​ಗೆ ಒಳಗಾಗಬೇಕಾಗುತ್ತದೆ. (ಏಜೆನ್ಸೀಸ್)