ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜಾತ್ರಾ ಮಹೋತ್ಸವದ ಅಂಗವಾಗಿ ಮೂಲ್ಕಿ ಒಂಬತ್ತು ಮಾಗಣೆ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆಯ ಭವ್ಯ ಮೆರವಣಿಗೆ ಗುರುವಾರ ಮೂಲ್ಕಿ ಬಸ್ ನಿಲ್ದಾಣದ ಬಳಿಯ ಶಾರದಾ ಮಂಟಪದಿಂದ ನಡೆಯಿತು.
ಬಪ್ಪನಾಡು ದೇವಸ್ಥಾನದ ಅರ್ಚಕ ನರಸಿಂಹ ಭಟ್ ಪ್ರಾರ್ಥನೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮೂಲ್ಕಿ ಸೀಮೆ ಅರಸ ದುಗ್ಗಣ್ಣ ಸಾವಂತರು, ಗೋಪಾಲಕೃಷ್ಣ ಭಟ್, ಮೂಲ್ಕಿ ನಗರ ಪಂಚಾಯಿತಿ ಅಧ್ಯಕ್ಷ ಸತೀಶ್ ಅಂಚನ್, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕೋಲ್ನಾಡ್ ಕೈಗಾರಿಕಾ ಸಂಘದ ಅಧ್ಯಕ್ಷ ಶೇಖರ್ ಸಾಲ್ಯಾನ್, ಉದಯ ಕುಮಾರ್ ಶೆಟ್ಟಿ ಆದಿಧನ್, ದೇವಪ್ರಸಾದ್ ಪುನರೂರು, ರಂಗನಾಥ ಶೆಟ್ಟಿ, ಮೂಲ್ಕಿ ಕಾರು ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಪ್ರಕಾಶ್ ಶೆಣೈ, ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ದೇವರಾಜ ಕೊಲಕಾಡಿ, ದಿನೇಶ್ ಹೆಗ್ಡೆ ಮಾನಂಪಾಡಿ, ಶಶೀಂದ್ರ ಸಾಲ್ಯಾನ್, ಲಿಂಗಪ್ಪ ಶೆಟ್ಟಿ, ಮಹೀಮ್ ಹೆಗ್ಡೆ, ಮೋಹನ್ ಕೋಟ್ಯಾನ್ ಶಿಮಂತೂರು, ಪ್ರಶಾಂತ್ ಕಾಂಚನ್, ಭಾನುಮತಿ ಶೆಟ್ಟಿ ಕಕ್ವಗುತ್ತು, ಲತಾ ಶೇಖರ್, ಮೋಹನ್ ದಾಸ್ ಹೆಜಮಾಡಿ, ಶಿವರಾಮ್ ಜಿ.ಅಮೀನ್, ಜೀವನ್ ಪೂಜಾರಿ ಕೋಲ್ನಾಡು ಮತ್ತಿತರರು ಉಪಸ್ಥಿತರಿದ್ದರು.
ಮೂಲ್ಕಿ ಹಿಂದು ಯುವ ಸೇನೆ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು. ಬಳಿಕ ವಿವಿಧ ಬಿರುದಾವಳಿ ಹಾಗೂ ಕುಣಿತ ಭಜನೆಯೊಂದಿಗೆ ಮೆರವಣಿಗೆ ಮೂಲಕ ಹೊರೆಕಾಣಿಕೆ ಬಪ್ಪನಾಡು ಕ್ಷೇತ್ರ ತಲುಪಿತು.