ಪೆರ್ಡೂರು ಗ್ರಾಪಂ ಗ್ರಂಥಾಲಯ ಅರಿವು ಕೇಂದ್ರ ಲಾಂಛನವನ್ನು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ ಅನಾವರಣಗೊಳಿಸಿದರು 
ಜಿಲ್ಲೆ

ಅರಿವು ಕೇಂದ್ರದ ಲಾಂಛನ ಅನಾವರಣ

ಇಂದಿರಾ ಎನ್ ಕೆ

ಹೆಬ್ರಿ: ಪೆರ್ಡೂರು ಗ್ರಾಪಂ ಗ್ರಂಥಾಲಯ ಅರಿವು ಕೇಂದ್ರ ಲಾಂಛನವನ್ನು ಗ್ರಾಪಂ ಅಧ್ಯಕ್ಷೆ ಚೇತನಾ ಶೆಟ್ಟಿ ಅನಾವರಣಗೊಳಿಸಿದರು.
ಸಾರ್ವಜನಿಕರು, ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗ್ರಂಥಾಲಯದ ಪ್ರಯೋಜನ ಪಡೆಯುವಂತೆ ಸಲಹೆ ನೀಡಿದರು. ಉಪಾಧ್ಯಕ್ಷ ದೇವು ಪೂಜಾರಿ, ಗ್ರಾಮಕರಣಿಕ ಗುರುಪ್ರಸಾದ್, ಪಂಚಾಯಿತಿ ಸದಸ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಪಂಚಾಯಿತಿ ಕಾರ್ಯದರ್ಶಿ ಪಾಪಣ್ಣ ಸ್ವಾಗತಿಸಿದರು. ಸಹಾಯಕಿ ಭಾಗೀರಥಿ ವಂದಿಸಿದರು.