ನೋ ಪ್ಲಾಸ್ಟಿಕ್-ಬೀ ಫೆಂಟಾಸ್ಟಿಕ್’ಎಂಬ ಸಂದೇಶದೊಂದಿಗೆ ಪರಿಸರ ಹೋರಾಟಗಾರ ಆರ್.ಪದ್ಮರಾಜ್ ಗುರುವಾರ ಕಾಸರಗೋಡಿನಿಂದ ಪಾದಯಾತ್ರೆ ಅರಂಭಿಸಿದರು. 
ಜಿಲ್ಲೆ

ಪ್ಲಾಸ್ಟಿಕ್ ಮಾಲಿನ್ಯ ವಿರುದ್ಧ ಜಾಗೃತಿ: ಕಾಸರಗೋಡಿನಿಂದ ತಿರುವನಂತಪುರಕ್ಕೆ ಪಾದಯಾತ್ರೆ ಆರಂಭಿಸಿದ ಪದ್ಮರಾಜ್

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ವಿಶ್ವ ಪರಿಸರ ದಿನಾಚರಣೆಯ ಪೂರ್ವಭಾವಿಯಾಗಿ ’ನೋ ಪ್ಲಾಸ್ಟಿಕ್-ಬೀ ಫೆಂಟಾಸ್ಟಿಕ್’ಎಂಬ ಆಂಗ್ಲ ಭಾಷೆಯ ಸಂದೇಶದೊಂದಿಗೆ ಪರಿಸರ ಹೋರಾಟಗಾರ ಆರ್.ಪದ್ಮರಾಜ್ ಕಾಸರಗೋಡಿನಿಂದ ತಿರುವನಂತಪುರವರೆಗೆ ಜಾಗೃತಿ ಸಂದೇಶದ ಪಾದಯಾತ್ರೆ ಆರಂಭಿಸಿದ್ದಾರೆ.

ಕೊಲ್ಲಂ ಜಿಲ್ಲಾ ಶುಚಿತ್ವ ಮಿಷನ್, ಕೊಟ್ಟಿಯಂ ರೋಟರಿ ಕ್ಲಬ್, ಕಾಸರಗೋಡು ಜಿಲ್ಲಾ ಶುಚಿತ್ವ ಮಿಷನ್‌ನ ಸಹಯೋಗದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಾಸರಗೋಡು ಪದ್ಮಶ್ರೀ ಅಲಿಮಾಣಿಕ್‌ಫಾನ್ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಓಷಿಯಾನೋಗ್ರಫಿ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ. ಕಾಸರಗೋಡು ವಿದ್ಯಾನಗರದ ಸಿವಿಲ್ ಸಟೇಶನ್ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್, ಐಎಎಸ್ ಪಾದಯಾತ್ರೆಗೆ ಚಾಲನೆ ನೀಡಿದರು.

ತಿರುವನಂತಪುರಕ್ಕೆ ಜೂನ್ 5ರಂದು ತಲುಪಲಿರುವ ಪಾದಯಾತ್ರೆ, ವಿಶ್ವ ಪರಿಸರ ದಿನಾಚರಣೆಯೊಂದಿಗೆ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ಕೊಟ್ಟಿಯಂ ರೋಟರಿ ಕ್ಲಬ್ ಅಧ್ಯಕ್ಷ ಶಿಬು ರಾವುತರ್, ಕೋ-ಆರ್ಡಿನೇಟರ್ ರಾಜನ್ ಕೈನೋಸ್, ಕಾಸರಗೋಡು ರೋಟರಿ ಕ್ಲಬ್ ಅಧ್ಯಕ್ಷ ಗೌತಮ್ ಭಕ್ತ, ಕಾರ್ಯದರ್ಶಿ ಶ್ರೀಜೇಶ್, ಚೈಲ್ಡ್ ಪ್ರೊಟೆಕ್ಟ್ ಅಧ್ಯಕ್ಷ ಸಿ.ಕೆ.ನಾಸರ್, ಇಸಾಕುಞಿ ಸೀತಾಂಗೋಳಿ ಉಪಸ್ಥಿತರಿದ್ದರು.