ಕಾಸರಗೋಡು: ಪೆರ್ಲ ಪೇಟೆಯ ಮುಖ್ಯರಸ್ತೆಯಲ್ಲಿ ಬುಧವಾರ ರಾತ್ರಿ ಆಟೋರಿಕ್ಷಾ ಹಿಂಭಾಗಕ್ಕೆ ಕಾರು ಡಿಕ್ಕಿಯಾಗಿ ಆಟೋ ಚಾಲಕ ಮಣಿಯಂಪಾರೆ ಶೇಣಿ ಬಾರೆದಳ ನಿವಾಸಿ ನಾರಾಯಣ ಮೂಲ್ಯ(67) ಮೃತಪಟ್ಟಿದ್ದಾರೆ. ಆಟೋ ಹಿಂಭಾಗಕ್ಕೆ ಕಾರು ಡಿಕ್ಕಿಯಾಗಿದ ವೇಳೆ ಆಟೋ ಪಲ್ಟಿಯಾಗಿದೆ. ಅದರಲ್ಲಿದ್ದ ಪ್ರಯಾಣಿಕರಿಗೂ ತೀವ್ರ ಗಾಯವಾಗಿದೆ. ಶೇಣಿ ಅಯ್ಯಪ್ಪ ಮಂದಿರದ ಸ್ಥಾಪಕ ಸದಸ್ಯರಾಗಿದ್ದ ನಾರಾಯಣ ಮೂಲ್ಯ ಅವರು ಗುರುಸ್ವಾಮಿಗಳಾಗಿದ್ದರು.