ಜಿಲ್ಲೆ

ಹಲ್ಲೆಗೆ ಯತ್ನ, ಪೊಲೀಸರಿಗೆ ದೂರು

ಇಂದಿರಾ ಎನ್ ಕೆ

ಸುಳ್ಯ: ಮರ್ಕಂಜದ ಕಾವೂರು ಶ್ರೀ ಮಹಾವಿಷ್ಣು ದೇವಸ್ಥಾನದ ಅರ್ಚಕರಿಗೆ ಅದೇ ದೇವಸ್ಥಾನದ ಮಾಜಿ ಅರ್ಚಕ ರಾಡ್‌ನಿಂದ ಹಲ್ಲೆ ನಡೆಸಲು ಯತ್ನಿಸಿದ ಘಟನೆ ನಡೆದಿದೆ. ಶ್ರೀ ಮಹಾವಿಷ್ಣು ದೇವಳದ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ ಅವರು ಮಾಜಿ ಅರ್ಚಕ ಸುಬ್ರಹ್ಮಣ್ಯ ನೆಲ್ಲಿತ್ತಾಯ ವಿರುದ್ಧ ಸುಳ್ಯ ಪೊಲೀಸರಿಗೆ ದೂರು ನೀಡಿದ್ದಾರೆ.