ರಾಮನಗರ: ಚನ್ನಪಟ್ಟಣ ನಗರಸಭೆ ಸದಸ್ಯೆ ಮನೆ ಮೇಲೆ ಪುಂಡರ ತಂಡವೊಂದು ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿರವ ಘಟನೆ ಸೋಮವಾರ ರಾತ್ರಿ ನಡೆದಿದೆ. ಚನ್ನಪಟ್ಟಣ ನಗರದ ಮಹದೇಶ್ವರ ದೇವಸ್ಥಾನದ ಬಳಿ ಇರುವ 31ನೇ ವಾರ್ಡ್ ನಗರಸಭೆ ಸದಸ್ಯೆ ಮಂಗಳಮ್ಮ ಅವರ ಮನೆಗೆ ನುಗ್ಗಿದ 25ಕ್ಕೂ ಹೆಚ್ಚು ಮಂದಿ ಇದ್ದ ಪುಂಡರ ತಂಡ
ಸೈಕಲ್, ಕುರ್ಚಿಗಳು ಹಾಗೂ ಕಿಟಕಿಗಳನ್ನು ದ್ವಂಸ ಮಾಡಿದೆ.
ಲಾಂಗು ಮಚ್ಚುಗಳೊಂದಿಗೆ ಈ ತಂಡ ದಾಳಿ ನಡೆಸಿದ್ದು ಯಾರ ಮನೆಯಲ್ಲಿದ್ದ ಮೇಲೂ ದಾಳಿ ನಡೆಸಿಲ್ಲ. ಆದರೆ ಯಾವ ಕಾರಣಕ್ಕೆ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿಲ್ಲ. ಆದರೆ ದಾಳಿ ವೇಳೆ ಸದಸ್ಯೆ ಮಂಗಳಮ್ಮ ಮನೆಯಲ್ಲಿಯೇ ಇದ್ದರು ಎಂದು ತಿಳಿದು ಬಂದಿದ್ದು, ಅವರೆದುರೇ ಈ ಕೃತ್ಯ ನಡೆಸಿದ್ದಾರೆ. ಮಂಗಳಮ್ಮ ಪುತ್ರ ಶಿವು ಬಿಜೆಪಿ ನಗರ ಮೋರ್ಚಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.