More

    ಅಮಾವಾಸ್ಯೆ ಎಂದರೆ ಸಾಕು ಈ ಮನೆಯವರಿಗೇನೋ ದುಗುಡ; ಮಾಟ-ಮಂತ್ರ ಮಾಡಿಸುತ್ತಿರುವುದ್ಯಾರು ಎಂಬುದಿನ್ನೂ ನಿಗೂಢ..

    ವಿಜಯಪುರ: ಅಮಾವಾಸ್ಯೆ ಎಂದರೆ ಈ ಮನೆಯವರಿಗೇನೋ ದುಗುಡ. ಏಕೆಂದರೆ ಕಳೆದ ಕೆಲವು ಅಮಾವಾಸ್ಯೆಗಳಿಂದ ಈ ಮನೆ ಮುಂದೆ ಮತ್ತೆ ಮತ್ತೆ ವಾಮಾಚಾರ ನಡೆಯುತ್ತಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದರೂ ದುಷ್ಕೃತ್ಯ ಎಸಗಿರುವವರ ಪತ್ತೆ ಇನ್ನೂ ಆಗಿಲ್ಲ.

    ವಿಜಯಪುರ ಜಿಲ್ಲೆ ನಿಡಗುಂದಿಯ ಸಿದ್ರಾಮಪ್ಪ ಕುಂಬಾರ ಎಂಬವರ ಮನೆ ಮುಂದೆ ಇಂಥದ್ದೊಂದು ಆತಂಕಕಾರಿ ಬೆಳವಣಿಗೆ ಮತ್ತೆ ಮತ್ತೆ ಕಂಡುಬರುತ್ತಿದೆ. ಕಳೆದ ಅಮಾವಾಸ್ಯೆಯಂದು ರಾತ್ರಿ ಮನೆ ಮುಂದೆ ಬಾಗಿಲಿಗೆ ಹಸಿ ತೆಂಗಿನ ಕಾಯಿ, ಲಿಂಬೆ ಹಣ್ಣುಗಳು ಇರುವ ಹಾರ ಕಟ್ಟಿ, ಪೂಜೆ ಮಾಡಿದ್ದಾರೆ. ನಾನಾ ಕಡೆ ಕುಂಕುಮ ಚೆಲ್ಲಿದ್ದಾರೆ ಎಂದು ಮನೆಯವರು ಹೇಳಿದ್ದಾರೆ.

    ಹೀಗೆ ಅಮಾವಾಸ್ಯೆಯಂದು ನಡೆಯುತ್ತಿರುವುದು ಇದು ನಾಲ್ಕನೇ ಬಾರಿ. ಈ ಕುರಿತು ನಿಡಗುಂದಿ ಪೊಲೀಸರಿಗೆ ಮೌಖಿಕವಾಗಿ ದೂರು ನೀಡಲಾಗಿದ್ದು, ವಾಮಾಚಾರ ಯಾರು ಮಾಡುತ್ತಿದ್ದಾರೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಆಸ್ತಿಯ ವಿಷಯದಲ್ಲಿ ಮನೆಯಲ್ಲಿಯೇ ಸ್ವಲ್ಪ
    ಅಸಮಾಧಾನವಿದ್ದು, ಕುಟುಂಬಸ್ಥರೇ ವಾಮಾಚಾರ ಮಾಡಿರುವ ಸಂಶಯವಿದೆ ಎನ್ನಲಾಗಿದೆ. ವಾಮಾಚಾರದಿಂದಾಗಿ ಮನೆಯಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ಭಾನುವಾರ ರಾತ್ರಿಯೂ ನಿಡಗುಂದಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಇದನ್ನೂ ಓದಿ: ಮೊನ್ನೆಮೊನ್ನೆಯಷ್ಟೇ ಜನ್ಮದಿನ ಆಚರಿಸಿಕೊಂಡಿದ್ದ ಸಾ.ಚ. ಇನ್ನಿಲ್ಲ ; ಹಿರಿಯ ಪತ್ರಕರ್ತ ಸಾಹುಕಾರ್ ಚಂದ್ರಶೇಖರ್ ರಾವ್ ನಿಧನ

    ಸಿದ್ರಾಮಪ್ಪ ಅವರ ಮನೆ ಸಮೀಪ ಅವರದೇ ಜಾಗದಲ್ಲಿ ಹಾಕಿದ ತಗಡಿನ ಶೆಡ್​​ನಲ್ಲಿ ಸಿದ್ರಾಮಪ್ಪ ಕುಂಬಾರ ರಾತ್ರಿ ಮಲಗುತ್ತಾರೆ. ಅಲ್ಲಿಯೇ ಈ ವಾಮಾಚಾರ ನಡೆದಿದೆ. ಶೆಡ್‌ನ ಪಕ್ಕದ ವಿದ್ಯುತ್ ಕಂಬದಿಂದ ವಿದ್ಯುತ್ ತಂತಿಯನ್ನು ಅವರ ಶೆಡ್ ಮೇಲೆ ಒಗೆದಿದ್ದಾರೆ. ತಂತಿಯಿಂದ ವಿದ್ಯುತ್ ಪ್ರಸರಣ ಆಗಿಲ್ಲ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ತಪ್ಪಿತಸ್ಥರನ್ನು ತಕ್ಷಣವೇ ಕಂಡು ಹಿಡಿದು ಅವರನ್ನು ಬಂಧಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

    ಆರಂಭದ ಆ 25 ವರ್ಷಗಳೇ ಇಡೀ ಬದುಕನ್ನು ರೂಪಿಸುವುದು: ವಿಜಯವಾಣಿ ಕ್ಲಬ್​ಹೌಸ್​ನಲ್ಲಿ ರವಿ ಡಿ. ಚನ್ನಣ್ಣನವರ್​ ಸಂವಾದ

    15-20 ವರ್ಷಗಳಲ್ಲಿ ನಡೆಯಬಹುದು ಅಂದುಕೊಂಡಿದ್ದು ಇಂದೇ ಸಂಭವಿಸಿತು!; ನಟ ಅಲ್ಲು ಅರ್ಜುನ್ ಬದುಕಲ್ಲೊಂದು ವಿಸ್ಮಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts