ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿ ಇಲ್ಲಿಗೆ ಅಶ್ವಥಮ್ಮ ಕಂಚಿಗೋಡು ಒಂದು ಲಕ್ಷ ರೂ.ಹಣ ದೇಣಿಗೆ ನೀಡಿದರು. 
ಜಿಲ್ಲೆ

ಮಂದಾರ್ತಿ ದೇವಳಕ್ಕೆ ಒಂದು ಲಕ್ಷ ರೂ. ದೇಣಿಗೆ ಹಸ್ತಾಂತರ

ಕೋಟ: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮಂದಾರ್ತಿ ಇಲ್ಲಿಗೆ ಅಶ್ವಥಮ್ಮ ಕಂಚಿಗೋಡು ಒಂದು ಲಕ್ಷ ರೂ.ಹಣ ದೇಣಿಗೆ ನೀಡಿದರು.

ಈ ಹಿಂದೆ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನ, ಮಂಗಳಾದೇವಿ ಹಾಗೂ ಪೊಳಲಿ ರಾಜರಾಜೇಶ್ವರೀ ದೇವಸ್ಥಾನಕ್ಕೆ ಅನ್ನಸಂತರ್ಪಣೆಗಾಗಿ ತಾನು ಭಿಕ್ಷೆ ಬೇಡಿ ಬಂದ ಹಣ ಅನ್ನಸಂತರ್ಪಣೆಗಾಗಿ ದಾನ ನೀಡಿದ್ದರು. ಈ ಬಾರಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇಗುಲದ ಅನ್ನಸಂತರ್ಪಣೆಗಾಗಿ ಶುಕ್ರವಾರ ಒಂದು ಲಕ್ಷ ರೂ.ಹಣ ದಾನ ನೀಡಿದ್ದಾರೆ. ದೇಗುಲದ ಸಿಬ್ಬಂದಿ ಉಪಸ್ಥಿತರಿದ್ದರು.