ಪುತ್ತೂರು ಗ್ರಾಮಾಂತರ: ರೈ ಎಸ್ಟೇಟ್ ಎಜುಕೇಶನಲ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ಪ್ರವರ್ತಕ, ಶಾಸಕ ಅಶೋಕ್‌ಕುಮಾರ್ ರೈ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ನ.2ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ತಾಲೂಕಿನ ಪ್ರತಿ ಮನೆಗೂ ಆಹ್ವಾನ ನೀಡಲಾಗುವುದು ಎಂದು ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಹೇಳಿದರು.
ಕೆದಂಬಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಕ್ರಮದ ಕರಪತ್ರ ಬಿಡುಗಡೆ ಮಾಡಿ ಗ್ರಾಮ ಪ್ರಚಾರಕ್ಕೆ ಚಾಲನೆ ನೀಡಿದರು.
ಬೋಳೋಡಿ ಚಂದ್ರಹಾಸ ರೈ ಮಾತನಾಡಿ, ಅಶೋಕ್‌ಕುಮಾರ್ ರೈ ಪ್ರತಿವರ್ಷ ಜನರ ಜತೆ ದೀಪಾವಳಿ ಆಚರಿಸಿ ವಸ್ತ್ರ ವಿತರಣೆಯೊಂದಿಗೆ ಭೋಜನ ನೀಡುತ್ತಿರುವುದು ಅತ್ಯಂತ ಪುಣ್ಯದ ಕೆಲಸ ಎಂದರು.
ಟ್ರಸ್ಟ್ ಪ್ರಮುಖರಾದ ನಿಹಾಲ್ ಪಿ.ಶೆಟ್ಟಿ ಮಾತನಾಡಿ, 75 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ವಸ್ತ್ರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುವುದು ಎಂದರು.
ಶಿವನಾಥ ರೈ ಮೇಗಿನಗುತ್ತು, ಎ.ಕೆ.ಜಯರಾಮ ರೈ, ಕಮಲೇಶ್ ಸರ್ವೆದೊಳಗುತ್ತು, ಸಂತೋಷ್ ನೆಹರುನಗರ, ಶಶಿ ಕೃಷ್ಣನಗರ, ಸುಚರಿತ್ ಜೈನ್ ಬೊಳುವಾರು ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯೆ ಪದ್ಮಾವತಿ ಸ್ವಾಗತಿದರು. ಅರುಣಾ ಕಾರ್ಯಕ್ರಮ ನಿರೂಪಿಸಿದರು.